ಲಕ್ನೋ : ಪೆಹಲ್ಗಾಮ್ ದಾಳಿಯ ಬಳಿಕ ಪಾಕ್‌ಗೆ ಸಿಂದೂರ ಅಪರೇಷನ್ ಮೂಲಕ ಏಟು ಕೊಟ್ಟಿರುವ ಭಾರತ, ತನ್ನ ಕಾರ್ಯತಂತ್ರ ಸಾಮರ್ಥ್ಯ ಬಲಪಡಿಸುವ ಯೋಜನೆ ರೂಪಿಸುತ್ತಿದೆ. ಪಾಕ್ ಪ್ರತಿದಾಳಿಗೆ ಹೊಂಚು ಹಾಕುತ್ತಿರುವ ನಡುವೆ ಪಾಕ್‌ಗೆ ನಡುಕ ಹುಟ್ಟಿಸುವಂತೆ ಭಾರತ ಮಾಡುತ್ತಿದೆ. ಹೌದು, ಶಕ್ತಿಶಾಲಿ ಅಸ್ತ್ರವಾದ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಲಕ್ನೋದಲ್ಲಿ ತಲೆ ಎತ್ತಿದೆ. ಇದರ ಉದ್ಘಾಟನಾ ಸಮಾರಂಭ ಮೇ 11 ರಂದು ನಡೆಯಲಿದೆ.
ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ವಿಶ್ವದ ಅತ್ಯಂತ ವೇಗದ ಮತ್ತು ವಿನಾಶಕಾರಿ ಕ್ಷಿಪಣಿಗಳಲ್ಲಿ ಒಂದು. ಇದು ಭಾರತದ ರಕ್ಷಣಾ ವಲಯಕ್ಕೆ ಬಲ ತುಂಬಲಿದ್ದು, ಭಾರತದ ರಕ್ಷಣಾ ಉತ್ಪಾದನಾ ಪ್ರಯಾಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಲಿದೆ. ಇದು ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ರಷ್ಯಾದ ಸರ್ಕಾರಿ ಸಂಸ್ಥೆ NPO ಮಶಿನೋಸ್ಟೋನಿನ್ಯಾ ನಡುವಿನ ಜಂಟಿ ಉದ್ಯಮವಾಗಿದೆ. ಇದನ್ನೂ ಓದಿ : ಪಾಕಿಸ್ತಾನದ ಲಾಹೋರ್‌ನಲ್ಲಿ ಮೂರು ಕಡೆ ಸ್ಫೋಟ ಬ್ರಹ್ಮೋಸ್ ಏರೋಸ್ಪೇಸ್ ಅನ್ನು 50.5% ಭಾರತೀಯ ಮತ್ತು 49.5% ರಷ್ಯಾದ ಮಾಲೀಕತ್ವದೊಂದಿಗೆ ಸ್ಥಾಪಿಸಲಾಗಿದೆ. ಈ ಘಟಕಕ್ಕೆ ಬ್ರಹ್ಮೋಸ್ ಏರೋಸ್ಪೇಸ್ 300 ಕೋಟಿ ಹೂಡಿಕೆ ಮಾಡುತ್ತಿದೆ. ಡಿಸೆಂಬರ್ 2021 ರಲ್ಲಿ ರಾಜ್ಯ ಸರ್ಕಾರ 80 ಹೆಕ್ಟೇರ್ ಭೂಮಿಯನ್ನು ಯೋಜನೆಗಾಗಿ ಉಚಿತವಾಗಿ ಮಂಜೂರು ಮಾಡಿತ್ತು.