ಬೆಂಗಳೂರು: ಶಾಸಕ ಜನಾರ್ದನ ರೆಡ್ಡಿ ಅವರ ಶಾಸಕತ್ವ ಅನರ್ಹತೆ ಬಗ್ಗೆ ಕೋರ್ಟ್‌ನಿಂದ ಆದೇಶ ಬಂದ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.
ಸಿಬಿಐ ಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾಗಿರುವ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡುವ ವಿಚಾರ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಜನಾರ್ದನ ರೆಡ್ಡಿಗೆ ಶಿಕ್ಷೆ ಆಗಿರುವ ವಿಚಾರ ಮಾಧ್ಯಮ, ಪತ್ರಿಕೆಗಳ ಮೂಲಕ ನನಗೆ ತಿಳಿದಿದೆ. ಮಾಧ್ಯಮ, ಪತ್ರಿಕೆಗಳನ್ನು ನೋಡಿ ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಕೋರ್ಟ್‌ನಿಂದ ಆದೇಶ ಬರಲಿ. ಬಳಿಕ ಕಾನೂನು ಪ್ರಕಾರ, ಸಂವಿಧಾನದ ಪ್ರಕಾರ ಕ್ರಮ ತಗೆದುಕೊಳ್ಳವುದಾಗಿ ಹೇಳಿದರು.
ಇದೇ ವೇಳೆ 18 ಶಾಸಕರ ಅಮಾನತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರು ಪತ್ರ ಬರೆದಿದ್ದರು. ನಾನು ಊರಿನಲ್ಲಿ ಇರಲಿಲ್ಲ. ರಾಜ್ಯಪಾಲರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಆದಷ್ಟು ಬೇಗ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚೆ ಮಾಡುವುದಾಗಿ ತಿಳಿಸಿದರು.