ನವದೆಹಲಿ : ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನ ಸ್ಥಿತಿ ಇದೀಗ ಮತ್ತಷ್ಟು ಭೀಕರತೆಯತ್ತ ಹೊರಳುವ ಸಾಧ್ಯತೆ ಕಂಡುಬರುತ್ತಿದೆ. ಭಾರತದ ದೆಹಲಿಯನ್ನು ಗುರಿಯಾಗಿರಿಸಿ ಪಾಕಿಸ್ತಾನವು ಕ್ಷಿಪಣಿ ಪ್ರಯೋಗಿಸಿದ್ದು, ಇದನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ.
ಪಾಕ್ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಪ್ರಮುಖ ಎಂದೇ ಗುರುತಿಸಿಕೊಂಡಿರುವ ರಾವಲ್ಪಿಂಡಿಯ ನೂರ್ ಖಾನ್ ಸೇರಿದಂತೆ ಪ್ರಮುಖ ಮೂರು ವಾಯು ನೆಲೆಗಳ ಮೇಲೆ ಭಾರತವು ಕ್ಷಿಪಣಿ ದಾಳಿ ನಡೆಸಿದೆ.
ಪರಿಣಾಮ ಪಾಕಿಸ್ತಾನದ ಎಲ್ಲಾ ಮೂರು ವಾಯು ನೆಲೆಗಳಿಗೆ ಭಾರೀ ಹಾನಿ ಉಂಟಾಗಿದೆ ಎನ್ನಲಾಗಿದೆ. ಭಾರತದಿಂದ ತನ್ನ ವಾಯು ಘಟನೆ ಹಿನ್ನೆಲೆಯಲ್ಲಿ ಸದ್ಯ ಪಾಕಿಸ್ತಾನವು ತನ್ನ ಎಲ್ಲಾ ಎಲ್ಲಾ ನಾಗರಿಕ ಮತ್ತು ವಾಣಿಜ್ಯ ವಾಯು ಸಂಚಾರವನ್ನು ಸ್ಥಗಿತಗೊಳಿಸಿದೆ.