ನವದೆಹಲಿ: ಕೇರಳಕ್ಕೆ ನೈರುತ್ಯ ಮಾನ್ಸೂನ್ ಮಳೆ ಮೇ 27ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಡಿಕೆಯಂತೆ ಜೂನ್ 1ರಂದು ಕೇರಳಕ್ಕೆ ಮಾನ್ಸೂನ್ ಮಳೆ ಪ್ರವೇಶಿಸಲಿದೆ. ಆದರೆ, ಈ ಬಾರಿ 5 ದಿನ ಮೊದಲೇ ಮುಂಗಾರು ಆಗಮನವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ 2009ರಲ್ಲಿ ಮೇ 23ರಂದು ಮಳೆ ಪ್ರಾರಂಭವಾಗಿದ್ದು, ಈ ವರ್ಷ ನಿರೀಕ್ಷೆಯಂತೆ ಮೇ 27 ರಂದು ಕೇರಳಕ್ಕೆ ಮಾನ್ಸೂನ್ ಆಗಮಿಸಲಿದೆ.
16 ವರ್ಷದ ನಂತರ ಮೊದಲ ಬಾರಿಗೆ ಭಾರತದ ಮುಖ್ಯ ಭೂಭಾಗದಲ್ಲಿ ಮುಂಗಾರು ಮಾರುತಗಳು ಬೇಗನೆ ಪ್ರವೇಶಿಸಲಿವೆ. ಭಾರತದಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.