ದಾವಣಗೆರೆ: ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮುಗಿಲ್ ಪೇಟೆ , ಸಾಹೇಬ, ಬೃಹಸ್ಪತಿ , ಇನ್ನು ಅನೇಕ ಚಿತ್ರಗಳಲ್ಲಿ ನಟಿಸಿರುವ ರವಿಚಂದ್ರನ್ ಹಿರಿಯ ಮಗನಾದ ನಟ ಆರ್. ಮನೋರಂಜನ್ ರವಿಚಂದ್ರನ್ ರವರು ಇಂದು ವಿನೋಬನಗರದ ಪಿಸಾಳೆ ಕಾಂಪೌಂಡಿನಲ್ಲಿರುವ ಶ್ರೀ ಕನಕ ನಿಲಯ ಜಿಲ್ಲಾಧ್ಯಕ್ಷ ಎಂ.ಮನು ಇವರ ನಿವಾಸಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ಪೇಟ ಶಾಲು ಓದಿಸಿ ಲಕ್ಷ್ಮಿ ದೇವರ ಫೋಟೋ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹಾಗೂ ದಾವಣಗೆರೆ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷರಾದ ಎಂ. ಮನು ಶ್ರೀಮತಿ ಪೂರ್ಣಿಮಾ ಮನು ಕುಮಾರಿ ಹಂಸ ಕುಮಾರಿ ಮೇಘನಾ ಸಂತೋಷ್ ಬೆಂಗಳೂರು , ಚಂದ್ರಮೋಳಿ , ಜಿಲ್ಲಾ ಕಾರ್ಯಧ್ಯಕ್ಷ ಗಣೇಶ್ ಚಿನ್ನಿಕಟ್ಟಿ, ಜಿಲ್ಲಾ ಉಪಾಧ್ಯಕ್ಷ ಕೋಟ್ಯಾಳ ಸಿದ್ದೇಶ್, ಸಂಘಟನಾ ಕಾರ್ಯದರ್ಶಿ ಶ್ರವಣ್ ಕುಮಾರ, ಹಾಗೂ ದಯಾನಂದ್ ಮೋದಿ, ರಂಗನಾಥ್, ತರಳಬಾಳು ಗೋಲ್ಡ್ ಶಾಪ್ ಮಾಲೀಕರಾದ ಮಂಜುನಾಥ್ ,ನಿಂಗರಾಜ್ ಎಸ್, ರಾಮು ಗಗನ್ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.