ಮಂಗಳೂರು: ಸಾರ್ವಜನಿಕವಾಗಿಯೇ ಮಹಿಳೆಗೆ ಗುಪ್ತಾಂಗ ತೋರಿಸಿ ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿಕೃತಿ ಮೆರೆದಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸಂಬಂಧ ಉಪಾಧ್ಯಕ್ಷ ಪದ್ಮನಾಭ ಸಫಲ್ಯನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆಸಿದೆ. ಮನೆ ದಾರಿಗೆ ಗೇಟು ಅಳವಡಿಸಿದ್ದನ್ನು ಪ್ರಶ್ನಿಸಿದ್ದ ಮಹಿಳೆಗೆ ಪದ್ಮನಾಭ ಸಫಲ್ಯ ತನ್ನ ಗುಪ್ತಾಂಗ ತೋರಿಸಿದ್ದಾನೆ. ಈ ಸಂಬಂಧ ಮಹಿಳೆ ಪದ್ಮನಾಭ ಸಪಲ್ಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತೋಟದಲ್ಲಿ ತಾನು ಕೆಲಸ ಮಾಡುತ್ತಿದ್ದಾಗ ನಮ್ಮ ಮನೆಯ ದಾರಿಯಲ್ಲಿ ಗೇಟು ಅಳವಡಿಸುತ್ತಿದ್ದ ಶಬ್ದ ಕೇಳಿಸಿತು. ಅಲ್ಲಿಗೆ ತೆರಳಿ ಅದನ್ನು ವಿಡಿಯೋ ಮಾಡುತ್ತಿದ್ದಾಗ ಪದ್ಮನಾಭ ತನ್ನ ಚಡ್ಡಿಯನ್ನು ಜಾರಿಸಿ ಮಾರ್ಮಾಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಹಿನ್ನೆಯಲ್ಲಿ ಪದ್ಮನಾಭ ಸಪಲ್ಯನನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿ, ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜರೆಮಾರು ತಿಳಿಸಿದ್ದಾರೆ. ಅಲ್ಲದೆ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡುವಂತೆ ದಯಾನಂದ ಶೆಟ್ಟಿ ಸೂಚಿಸಿದ್ದಾರೆ.