ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಬೆಂಗಳೂರಿನಲ್ಲಿ ತಯಾರಾದ ಡ್ರೋನ್ಗಳು ಬಳಕೆಯಾಗಿವೆ.
ಆಲ್ಫಾ ಡಿಸೈನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿ ತಯಾರಿಸಿದ ಸೂಸೈಡ್ ಡ್ರೋನ್ಗಳು ಮೇಕ್ ಇನ್ ಇಂಡಿಯಾ ಶಕ್ತಿ ಏನು ಎಂಬುವುದನ್ನು ಇಡೀ ಜಗತ್ತಿಗೆ ಗೊತ್ತಾಗುವಂತೆ ಮಾಡಿವೆ. ಸ್ಕೈ ಸ್ಟ್ರೈಕರ್ ಅಂತ ಕರೆಯುವ ಈ ಸೂಸೈಡ್ ಡ್ರೋನ್ಗಳು ಉಗ್ರರನ್ನು ಸೆದೆಬಡಿದಿವೆ. ಈ ಸೂಸೈಡ್ ಡ್ರೋನ್ಗಳು ಆಪರೇಷನ್ ಸಿಂದೂರ್ನಲ್ಲಿ ತಮ್ಮ ಪವರ್ ತೋರಿಸಿವೆ.
ಸ್ಕೈ ಸ್ಟ್ರೈಕರ್ ಡ್ರೋನ್ಗಳ ಶಕ್ತಿ-ಸಾಮರ್ಥ್ಯ ಕುರಿತು ಆಲ್ಫಾ ಡಿಸೈನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಚೀಫ್ ಆಫ್ ರೇಟಿಂಗ್ ಆಫೀಸರ್ ರಾಘವೇಂದ್ರ ಆರೂರ್ ಮಾತನಾಡಿ, ಈ ಡ್ರೋನ್ಗಳು 100 ರಿಂದ 120 ಕಿಮೀವರೆಗೂ ಮೇಲೆ ಹೋಗಿ ಗಾಳಿಯಲ್ಲೇ ರೌಂಡ್ ಹೊಡೆಯುತ್ತವೆ. ಎದುರಾಳಿ ಪಡೆ ಕಂಡ ತಕ್ಷಣ ಟಾರ್ಗೆಟ್ ಫಿಕ್ಸ್ ಮಾಡಿಕೊಂಡು ಅಟ್ಯಾಕ್ ಮಾಡುತ್ತವೆ. ಸುಮಾರು 10 ಮೀಟರ್ ಸುತ್ತಮುತ್ತ ಡ್ಯಾಮೇಜ್ ಮಾಡುತ್ತವೆ. ಈ ಡ್ರೋನ್ಗಳನ್ನು ಭಾರತೀಯ ಸೇನೆಗೆ ಸರಬರಾಜು ಮಾಡಿದ್ದೇವೆ. ಇನ್ನೂ ಹೆಚ್ಚಿನ ಡ್ರೋನ್ಗಳನ್ನು ಸರಬರಾಜು ಮಾಡಲು ಸಿದ್ದರಿದ್ದೇವೆ ಎಂದು ಹೇಳಿದರು.