ನವದೆಹಲಿ: ಪಾಕ್’ನ ಬೆನ್ನಿಗೇ ಬಾಂಗ್ಲಾದೇಶ ಕೂಡ ಭಾರತದೊಂದಿಗೆ ಕಿರಿಕ್ ಶುರು ಮಾಡಿತ್ತು. ಇದೀಗ ಚಿಕನ್ ನೆಕ್ ಎಂದು ಕರೆಯಲ್ಪಡುವ ಬಾಂಗ್ಲಾ-ನೇಪಾಳ-ಭಾರತವನ್ನು ಸಂಪರ್ಕಿಸುವ ಭಾಗದಲ್ಲಿ ಭಾರತ ಸುದರ್ಶನ ಚಕ್ರ ಎಂದೇ ಕರೆಯಲ್ಪಡುವ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಇಲ್ಲಿ ನಿಯೋಜಿಸಿದೆ.
ಮೊಹಮ್ಮದ್ ಯೂನಸ್ ಚೀನಾಗೆ ಭೇಟಿ ನೀಡಿದ ನಂತರ ಭಾರತದೊಂದಿಗಿನ ಬಾಂಗ್ಲಾದೇಶದ ಸಂಬಂಧ ಮತ್ತಷ್ಟು ಹಳಸಿದೆ. ಮೊಹಮ್ಮದ್ ಯೂನಸ್ ಅವರ ಆಹ್ವಾನದ ಮೇರೆಗೆ, ಭಾರತದ ಗಡಿಯಿಂದ ಕೇವಲ 12-15 ಕಿಲೋಮೀಟರ್ ದೂರದಲ್ಲಿರುವ ಲಾಲ್ಮೋನಿರ್ಹತ್ನಲ್ಲಿರುವ ಹಳೆಯ ಎರಡನೇ ಮಹಾಯುದ್ಧದ ವಾಯುನೆಲೆಯನ್ನು ಪುನರುಜ್ಜೀವನಗೊಳಿಸಲು ಚೀನಾ ಬಾಂಗ್ಲಾದೇಶಕ್ಕೆ ಸಹಾಯ ಮಾಡುತ್ತಿದೆ ಎಂದು ವರದಿಯಾಗಿದೆ. ಈ ವಾಯುನೆಲೆಯು ಪ್ರಸ್ತುತ ಬಾಂಗ್ಲಾದೇಶದ ವಾಯುಪಡೆಯಿಂದ ಆಕ್ರಮಿಸಲ್ಪಟ್ಟಿದೆ. ಆದರೆ, ದಶಕಗಳಿಂದ ಇದು ನಿಷ್ಕ್ರಿಯವಾಗಿದೆ. ಇದು ಸಿಲಿಗುರಿ ಕಾರಿಡಾರ್(ಚಿಕನ್ ನೆಕ್)ನಿಂದ ಕೇವಲ 135 ಕಿಲೋಮೀಟರ್ ದೂರದಲ್ಲಿದೆ. ಇತ್ತೀಚೆಗೆ ಹಲವಾರು ಚೀನೀ ಮಿಲಿಟರಿ ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸ್ಥಳದ ಬಗ್ಗೆ ಚೀನಾದ ಹೆಚ್ಚುತ್ತಿರುವ ಆಸಕ್ತಿಯನ್ನು ತೋರಿಸುತ್ತದೆ. ಆದರೆ ಚಿಕನ್ ನೆಕ್ ಬಳಿ ಚೀನಾದ ಉಪಸ್ಥಿತಿಯನ್ನು ಭಾರತ ಒಪ್ಪುವುದಿಲ್ಲ. ಭಾರತವು ರಾಜತಾಂತ್ರಿಕ ಮಟ್ಟದಲ್ಲಿ ಬಾಂಗ್ಲಾದೇಶಕ್ಕೆ ಇದನ್ನು ಹಲವಾರು ಬಾರಿ ತಿಳಿಸಿದೆ.
ಭಾರತದ ಪ್ರತಿಕ್ರಿಯೆ ಏನು?:
ಪೂರ್ವ ಭಾಗದಲ್ಲಿ ಉದ್ಭವಿಸುತ್ತಿರುವ ಈ ಕಳವಳಗಳ ಮಧ್ಯೆ ಭಾರತೀಯ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುರಕ್ಷಿತವಾಗಿರಿಸಲು ವ್ಯಾಪಕ ಕ್ರಮಗಳನ್ನು ಕೈಗೊಂಡಿವೆ. ಅನೇಕ ಮುಂದುವರಿದ ಮಿಲಿಟರಿ ಸ್ವತ್ತುಗಳನ್ನು ಇಲ್ಲಿ ನಿಯೋಜಿಸಲಾಗಿದೆ. ವಿಶೇಷವಾಗಿ ಹಶಿಮಾರಾ ವಾಯುನೆಲೆಯಲ್ಲಿ ಮಿಗ್ ಮತ್ತು ರಫೇಲ್ ಯುದ್ಧ ವಿಮಾನಗಳ ಹಲವಾರು ಸ್ಕ್ವಾಡ್ರನ್ಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಬ್ರಹ್ಮೋಸ್ ಕ್ಷಿಪಣಿಗಳ ರೆಜಿಮೆಂಟ್ ಅನ್ನು ಕೂಡ ನಿಯೋಜಿಸಲಾಗಿದೆ. ಇದರೊಂದಿಗೆ, ಸೇನೆಯ ತ್ರಿಶಕ್ತಿ ದಳದ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸಲು MRSAM ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿಗಳು ಹಾಗೂ T-90 ಟ್ಯಾಂಕ್ಗಳೊಂದಿಗೆ ಲೈವ್-ಫೈರ್ ಅಭ್ಯಾಸವನ್ನು ನಡೆಸಲಾಗುತ್ತಿದೆ.