ಲಂಡನ: ಕಾನ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ನಲ್ಲಿ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಹಣೆಗೆ ಸಿಂಧೂರವಿಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ್ದಾರೆ.
78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು, 24ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ದೇಶ ವಿದೇಶದ ಕೆಲವೇ ಕೆಲವು ಕಲಾವಿದರಿಗೆ ಆಹ್ವಾನಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಐಶ್ವರ್ಯಾ ರೈ ಕೂಡ ಭಾಗಿಯಾಗಿದ್ದಾರೆ.
ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಿಳಿ ಬಣ್ಣದ ಸೀರೆಯುಟ್ಟು, ಹಣೆಗೆ ಸಿಂಧೂರವಿಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ನಟಿ ಐಶ್ವರ್ಯಾ ಕಂಗೊಳಿಸಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವಾಗ ನಗುತ್ತಾ ಕೈ ಮುಗಿದು ನಟಿ ನಮಸ್ಕರಿಸಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡತಿ ದಿಶಾ ಮದನ್, ಪ್ರಣಿತಾ ಸುಭಾಷ್, ಜಾನ್ವಿ ಕಪೂರ್, ರುಚಿ ಗುಜ್ಜರ್, ಆದಿತಿ ರಾವ್ ಹೈದರಿ, ಮೌನಿ ರಾಯ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.