ನವದೆಹಲಿ : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಸಿಬ್ಬಂದಿ ಗೀತಾ ಸಮೋಟಾ ಅವರು ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ ಸಿಐಎಸ್ಎಫ್ನ ಮೊದಲ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗೀತಾ ಯಶಸ್ವಿಯಾಗಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದಾರೆ ಎಂದು ಸಿಐಎಸ್ಎಫ್ನ ಪ್ರಕಟಣೆಯಲ್ಲಿ ತಿಳಿಸಿದೆ.
8,849 ಮೀಟರ್ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಶಿಖರವನ್ನು ಮೇ 19 ರ ಬೆಳಿಗ್ಗೆ ಗೀತಾ ಅವರು ತಲುಪಿದ್ದಾರೆ. ಶಿಖರವನ್ನು ಏರುವ ಮೂಲಕ ಭಾರತೀಯ ಮಹಿಳೆಯರಿಗೆ ಮತ್ತು ಸಿಐಎಸ್ಎಫ್ಗೆ ಕೀರ್ತಿ ತಂದಿದ್ದಾರೆ.