ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್(Mann Ki Baat) ಕಾರ್ಯಕ್ರಮದ 122 ನೇ ಸಂಚಿಕೆ ಇಂದು ಪ್ರಸಾರವಾಗಿದೆ. ಆಪರೇಷನ್ ಸಿಂದೂರ್ ಯಶಸ್ಸಿನ ನಂತರದ ಮೊದಲ ಮಾಸಿಕ ರೇಡಿಯೋ ಕಾರ್ಯಕ್ರಮ ಇದಾಗಿದ್ದು, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವಲ್ಲಿ ಭಾರತದ ಅಚಲ ಬದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಹಂಚಿಕೊಂಡರು. ಅಲ್ಲದೇ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೋಯ ಸೇನೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿ ಉಗ್ರರನ್ನು ಸದೆಬಡಿದಿರುವುದನ್ನು ಶ್ಲಾಘಿಸಿದರು. ಹಾಗಿದ್ದರೆ ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಏನು? ಯಾವೆಲ್ಲಾ ವಿಚಾರಗಳನ್ನು ಅವರು ಪ್ರಸ್ತಾಪಿಸಿದರು ಇಲ್ಲಿದೆ ಮಾಹಿತಿ
ಇಂದು, ಇಡೀ ರಾಷ್ಟ್ರವು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿದೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕುವ ದೃಢನಿಶ್ಚಯ ಹೊಂದಿದೆ. ಇಂದು, ಪ್ರತಿಯೊಬ್ಬ ಭಾರತೀಯರ ಸಂಕಲ್ಪವು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಪಡೆಗಳು ಗಡಿಯುದ್ದಕ್ಕೂ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ ನಿಖರತೆ ಮತ್ತು ನಿಖರತೆಯು ಅಸಾಧಾರಣವಾಗಿದೆ. ಆಪರೇಷನ್ ಸಿಂಧೂರ್ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ; ಇದು ನಮ್ಮ ಸಂಕಲ್ಪ, ಧೈರ್ಯ ಮತ್ತು ರೂಪಾಂತರಗೊಳ್ಳುತ್ತಿರುವ ಭಾರತದ ಚಿತ್ರವಾಗಿದೆ ಎಂದು ಹೇಳಿದರು.
ಪ್ರಧಾನಿ ಭಾಷಣದ ಪ್ರಮುಖಾಂಶಗಳು
- ಭಾರತದಾದ್ಯಂತ ನಡೆದ ತಿರಂಗ ಯಾತ್ರೆಗಳು, ಚಂಡೀಗಢದಿಂದ ಮಕ್ಕಳು ವರ್ಣಚಿತ್ರಗಳನ್ನು ತಯಾರಿಸುವುದನ್ನು ಮತ್ತು ನವಜಾತ ಶಿಶುಗಳಿಗೆ ಸಿಂಧೂರ್ ಹೆಸರಿಡುತ್ತಿರುವ ಬಗ್ಗೆ ಅವರು ಈ ವೇಳೆ ಪ್ರಸ್ತಾಪಿಸಿದರು.
- ಮಾವೋವಾದಿ ಹಿಂಸಾಚಾರ ಪೀಡಿತ ಪ್ರದೇಶಗಳಿಗೂ ಮೂಲಭೂತ ಸೌಲಭ್ಯಗಳು ತಲುಪಲು ಪ್ರಾರಂಭಿಸಿವೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ‘ಕಟೇಝರಿ’ ಎಂಬ ಹಳ್ಳಿಗೆ ಮೊದಲ ಬಾರಿಗೆ ಬಸ್ ಸೇವೆ ಶುರುವಾಗಿದೆ
- ಗುಜರಾತ್ನ ಗಿರ್ನಲ್ಲಿ ಸಿಂಹಗಳ ಜನಸಂಖ್ಯೆ 674 ರಿಂದ 891 ಕ್ಕೆ ಏರಿದೆ. ಸಿಂಹ ಗಣತಿಯ ನಂತರ ಬಹಿರಂಗಗೊಂಡ ಈ ಸಿಂಹಗಳ ಸಂಖ್ಯೆ ತುಂಬಾ ಉತ್ತೇಜನಕಾರಿಯಾಗಿದೆ.
- ಯೋಗ ದಿನದ ಜೊತೆಗೆ, ಆಯುರ್ವೇದ ಕ್ಷೇತ್ರ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.