ಕುಂದಾಪುರ: ಕುಂದಾಪುರದ ಮೊಗವೀರ ಸಭಾಭವನದಲ್ಲಿ ಇದೇ ಜೂ೨೦ರಿಂದ ೨೨ರವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ `ಅಖಂಡ ಭಾರತ ನಿರ್ಮಿಸಿಯೇ ಸಿದ್ಧ’ ಎಂಬ ವಿಷಯದ ಕುರಿತು ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಲಿದ್ದಾರೆ. ದ್ವೇಷ ಭಾಷಣ, ಕೋಮುಪ್ರಚೋದಿತ ಹೇಳಿಕೆಗಳನ್ನು ಉಪನ್ಯಾಸದಲ್ಲಿ ತರುವಂತಿಲ್ಲ ಎಂಬ ಆದೇಶದ ಮೇರೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಯುವ ಬ್ರಿಗೇಡ್ ಸಂಘಟನೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಆಯೋಜಕರಿಗೆ ಕೂಡಾ ಪೊಲೀಸರು ಹಲವು ಸೂಚನೆಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ಉಪನ್ಯಾಸದಲ್ಲಿ ರಾಜಕೀಯ ನಾಯಕರ ತೇಜೋವಧೆ, ಕೋಮುಪ್ರಚೋದಿತ ಹೇಳಿಕೆ ನೀಡಬಾರದು. ನಿಗದಿಪಡಿಸಿದ ಅವಧಿಯ ಒಳಗೆ ಕಾರ್ಯಕ್ರಮ ಮುಗಿಯಬೇಕು. ಕಾರ್ಯಕ್ರಮಕ್ಕೆ ಆಗಮಿಸಿದವರು ಶಾಂತ ರೀತಿಯಲ್ಲಿ ವರ್ತಿಸುವಲ್ಲಿ ಸಹಕರಿಸಬೇಕು. ಪೊಲೀಸರಿಗೆ ಈ ನಿಟ್ಟಿನಲ್ಲಿ ಬೆಂಬಲ ನೀಡಬೇಕು ಎಂದು ಆದೇಶಿಸಿದೆ.