ಬಾಲಿವುಡ್ ಸ್ಟಾರ್ ನಟರ ಪೈಕಿ ಭಾಯ್ ಜಾನ್ ಸಲ್ಮಾನ್ ಖಾನ್ ಕೂಡ ಒಬ್ಬರು. ಅವರ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಭಾರತದ ಅತ್ಯಂತ ಪ್ರಸಿದ್ಧ ಬ್ರಹ್ಮಚಾರಿ ನಟರಲ್ಲಿ ಇವರೂ ಒಬ್ಬರು. ಸದಾ ನಗುತ್ತ, ವ್ಯಾಯಾಮ, ಅಸಾಧಾರಣ ವ್ಯಕ್ತಿತ್ವ ಹೊಂದಿರುವ ಸಲ್ಮಾನ್ ಹಲವಾರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಕೆಲವೇ ಜನರಿಗೆ ತಿಳಿದಿದೆ.
ಹೌದು.. ಎಷ್ಟೋ ನೋವಿದ್ದರೂ ಸಹ ಸಲ್ಮಾನ್ ಖಾನ್ ಅವರು ಯಾವಾಗಲೂ ತಮ್ಮ ನೋವನ್ನು ಮರೆಮಾಚಲು ಇಷ್ಟ ಪಡುತ್ತಾರೆ. ಇತ್ತೀಚೆಗೆ, ಅವರು ‘ದಿ ಕಪಿಲ್ ಶರ್ಮಾ ಶೋ’ಗೆ ಬಂದಾಗ, ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಶಾಕಿಂಗ್ ವಿಷಯಗಳನ್ನು ಹಂಚಿಕೊಂಡರು… ಇದನ್ನು ಕೇಳಿ ಅಭಿಮಾನಿಗಳು ಗಾಬರಿಗೊಂಡಿದ್ದಾರೆ.
ಶೋನಲ್ಲಿ, ಸಲ್ಲು ಭಾಯ್ ಗೆ ‘ನಿಮ್ಮ ಜೀವನದಲ್ಲಿ ಹುಡುಗಿ ಇದ್ದಾಳೆಯೇ?’ ಅಂತ ಪ್ರಶ್ನೆ ಮಾಡಲಾಯಿತು. ಅದಕ್ಕೆ ಅವರು, ಪ್ರಸ್ತುತ ನನ್ನ ಜೀವನದಲ್ಲಿ ಯಾರೂ ಇಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮದುವೆಯ ನಂತರ ನಡೆಯುವ ಜಗಳಗಳು ಮತ್ತು ರಾಜಿಗಳನ್ನು ಸಹಿಸಿಕೊಳ್ಳುವ ತಾಳ್ಮೆಯೂ ನನ್ನಲ್ಲಿ ಇಲ್ಲ ಅಂತ ತಿಳಿಸಿದರು.
ನಾನು ಒಬ್ಬಂಟಿಯಾಗಿರಲು ಇಷ್ಟಪಡುತ್ತೇನೆ, ಯಾರೊಂದಿಗೂ ನನ್ನ ಸ್ಥಾನವನ್ನು ಹಂಚಿಕೊಳ್ಳಲು ಬಯಸುವುದಿಲ್ಲ, ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಜನರು ಸಣ್ಣ ವಿಷಯಗಳಿಗೆ ವಿಚ್ಛೇದನ ಪಡೆಯುತ್ತಾರೆ, ಅವರ ಅರ್ಧದಷ್ಟು ಹಣವೂ ಹೋಗುತ್ತದೆ, ನಾನು ಕಷ್ಟ ಪಟ್ಟು ದುಡಿದ ಹಣದ ಅರ್ಧವನ್ನು ಯಾರಿಗೂ ನೀಡಲು ಇಷ್ಟ ಪಡಲ್ಲ ಅಂತ ಸಲ್ಲು ತಮಾಷೆ ಮಾಡಿದರು.
ಇನ್ನು ಆರೋಗ್ಯ ವಿಚಾರವಾಗಿ ಮಾತನಾಡಿದ ಅವರು, ನಾನು ಹಲವು ವರ್ಷಗಳಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ, ಕೆಲವು ಸಮಯದಲ್ಲಿ, ಮೂಳೆಗಳು ಮುರಿದಿವೆ, ಪಕ್ಕೆಲುಬುಗಳು ಬಿರುಕು ಬಿಟ್ಟಿವೆ. ಟ್ರೈಜಿಮಿನಲ್ ನರಶೂಲೆಯಂತಹ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದೇನೆ, ಮೆದುಳಿನಲ್ಲಿ ರಕ್ತನಾಳದ ಉರಿಯೂತವಿದೆ, ಅದರ ಚಿಕಿತ್ಸೆ ನಡೆಯುತ್ತಿದೆ. AVM ಗೆ ಚಿಕಿತ್ಸೆಯೂ ನಡೆಯುತ್ತಿದೆ. ಆದರೂ ನಾನು ಆಕ್ಷನ್ ಸೀನ್ಗಳನ್ನು ಮಾಡುತ್ತಿದ್ದೇನೆ ಅಂತ ಹೇಳಿಕೊಂಡರು.
ಯಸ್.. ಸಲ್ಮಾನ್ ಖಾನ್ ಅವರ ಆರೋಗ್ಯ ಹಲವು ವರ್ಷಗಳಿಂದ ಚೆನ್ನಾಗಿಲ್ಲ. 2007 ರ ಸುಮಾರಿಗೆ ಅವರು ಟ್ರೈಜಿಮಿನಲ್ ನರಶೂಲೆಯ ಲಕ್ಷಣಗಳನ್ನು ಅನುಭವಿಸಿದರು ಅಂತ ಹೇಳಿಕೊಂಡಿದ್ದರು. 2011 ರಲ್ಲಿ, ಅವರು ಅದರ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದರು.. ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ..