ಚಿತ್ರದುರ್ಗ: ಒಳಮೀಸಲಾತಿ ಜಾರಿಗಾಗಿರಾಜ್ಯದಲ್ಲಿ ನಡೆಯುತ್ತಿರುವಜಾತಿಗಣತಿ ಸಮೀಕ್ಷೆಕಾರ್ಯ ಮತ್ತೆಯಾವುದೇ ಕಾರಣಕ್ಕೂ ವಿಸ್ತರಣೆಮಾಡಬಾರದುಎಂದು ಮಾಜಿ ಸಚಿವ ಎಚ್.ಆಂಜನೇಯಕೋರಿದರು.
ಬೆಂಗಳೂರಿನಲ್ಲಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್‌ಆಯೋಗದಕಚೇರಿಗೆ ಬುಧವಾರಭೇಟಿ ಮಾಡಿ ಮನವಿ ಮಾಡಿಕೊಂಡಅವರು, ಮೂರು ದಶಕಗಳ ಮಾದಿಗ ಸಮುದಾಯದ ಸಮಗ್ರ ಹೋರಾಟದ ಫಲ ಒಳಮೀಸಲಾತಿ ಜಾರಿಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದ್ದು, ಅದನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧರಾಗಿದ್ದಾರೆ.ಆದರೆ, ಎಕೆ, ಎಡಿ, ಆದಿಆಂಧ್ರ ಈ ಮೂರು ಜಾತಿಸೂಚಕಗಳಲ್ಲಿ ಮಾದಿಗ, ಛಲವಾದಿ ಸಮುದಾಯದವರು ಗುರುತಿಸಿಕೊಂಡಿರುವುದೇ ಮೀಸಲಾತಿ ಹಂಚಿಕೆ ಸಮಸ್ಯೆ ಆಗಿದೆಎಂದರು.
ಈ ಗೊಂದಲಕ್ಕೆತೆರೆ ಎಳೆದು ಅವರರ ಸಂಖ್ಯೆ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಗುರುತಿಸಲು ಪರಿಶಿಷ್ಟರಿಗೆ ಸೀಮಿತಗೊಳಿಸಿ ರಾಜ್ಯದಲ್ಲಿ ಮೇ 5ರಂದು ಜಾತಿಗಣತಿ ಸಮೀಕ್ಷೆಆರಂಭಗೊಂಡಿದೆ. ಆರಂಭದಲ್ಲಿತಾಂತ್ರಿಕ ಸಮಸ್ಯೆಕಾರಣಕ್ಕೆಆತಂಕ, ಗೊಂದಲಕ್ಕೆಕಾರಣವಾಗಿದ್ದು, ಕಾಲಕ್ರಮೇಣ ಸುಗಮವಾಗಿ ಆಗಿದೆ. ಆದರೆ, ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿಆಗಿಲ್ಲವೆಂಬ ಕಾರಣಕ್ಕೆ ಮೂರು ಬಾರಿ ಸಮೀಕ್ಷೆಯನ್ನುವಿಸ್ತರಣೆ ಮಾಡಲಾಗಿತ್ತುಎಂದು ಹೇಳಿದರು.
ಈಗ ಮತ್ತೊಮ್ಮೆ ಬೆಂಗಳೂರು ಮಹಾನಗರ ಪಾಲಿಕೆಗೆ ಸೀಮಿತಗೊಳಿಸಿ ಜು.6ರ ವರೆಗೆ ವಿಸ್ತರಣೆಮಾಡಲಾಗಿದೆ.ಇದೇಅಂತಿಮ ಅವಕಾಶ ಆಗಬೇಕು. ಯಾವುದೇಕಾರಣಕ್ಕೂಇನ್ನೊಮ್ಮೆ ವಿಸ್ತರಣೆಮಾಡಲೇಬಾರದು.ಈ ನಿಟ್ಟಿನಲ್ಲಿಆಯೋಗಕಠಿಣ ಕ್ರಮಕೈಗೊಳ್ಳಬೇಕು ಎಂದುಕೋರಿದರು.
ಈಗಾಗಲೇ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳ್ಳುವವರೆಗೂ ಬ್ಯಾಕ್‌ಲಾಗ್ ಸೇರಿಎಲ್ಲರೀತಿಯ ಸರ್ಕಾರಿ ಹುದ್ದೆಗಳ ನೇಮಕಾತಿಗೆತಡೆ ನೀಡಿದೆ. ಹಲವು ತಿಂಗಳುಗಳೇ ಆಗಿರುವುದರಿಂದ ಬಹಳಷ್ಟು ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗಕ್ಕಾಗಿಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಜೊತೆಗೆ ಒಳಮೀಸಲಾತಿ ಜಾರಿ ವಿಷಯದಲ್ಲಿಅನಗತ್ಯಗೊಂದಲ ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ.ಆದ್ದರಿಂದಏಕಸದಸ್ಯಆಯೋಗದಅಧ್ಯಕ್ಷರಾದತಾವುಯಾವುದೇಕಾರಣಕ್ಕೂ ಸಮೀಕ್ಷೆ ಜು.6ರ ನಂತರ ವಿಸ್ತರಣೆ ಮಾಡಬಾರದುಎಂದು ತಿಳಿಸಿದರು.