ಚಂಡೀಗಢ :ಸರ್ಕಾರಿ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಲೇ UPSC ಪರೀಕ್ಷೆಗೆ ತಯಾರಾಗಿ ಐಎಎಸ್ ಅಧಿಕಾರಿಯಾದ. ಡಾ. ಅಂಜಲಿ ಗರ್ಗ್ ಅವರ ಯಶೋಗಾಥೆ.
ಎಂಬಿಬಿಎಸ್ ಓದುವುದು ಭಾರತದ ಅತ್ಯಂತ ಕಷ್ಟಕರವಾದ ಕೋರ್ಸ್ಗಳಲ್ಲಿ ಒಂದಾಗಿದೆ. ಇದಕ್ಕಾಗಿ ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ನೀಟ್ ನಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. NEET ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಂಬಿಬಿಎಸ್ ಮಾಡಿ, ವೈದ್ಯೆಯಾಗಿ, ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡಿ UPSC ಪರೀಕ್ಷೆಗೆ ತಯಾರಾಗಿ ಐಎಎಸ್ ಅಧಿಕಾರಿಯಾದವರು ಡಾ. ಅಂಜಲಿ ಗರ್ಗ್.
ಅಂಜಲಿ ಗರ್ಗ್ ಚಂಡೀಗಢದ ನಿವಾಸಿ . ಅವರು 1996ರ ಸೆಪ್ಟೆಂಬರ್ 14 ರಂದು ಜನಿಸಿದರು. ವ್ಯಾಪಾರ ಕುಟುಂಬಕ್ಕೆ ಸೇರಿದ ಅವರು ಇಡೀ ಕುಟುಂಬದಲ್ಲಿ ಯಾರೂ ನಾಗರಿಕ ಸೇವೆಯಲ್ಲಿಲ್ಲ. ಡಾ. ಅಂಜಲಿ ಗರ್ಗ್ ಮೊದಲು ವೈದ್ಯೆಯಾಗುವ ಕನಸನ್ನು ನನಸು ಮಾಡಿಕೊಂಡರು. ನಂತರ ಅದಕ್ಕಿಂತ ಒಂದು ಹೆಜ್ಜೆ ಎತ್ತರಕ್ಕೆ ಏರುವ ಕನಸನ್ನು ಕಂಡಿದ್ದ ಅವರು ತನ್ನ ಪರಿಶ್ರಮದ ನೆರವಿನಿಂದ ಅದನ್ನು ನನಸಾಗಿಸಿಕೊಂಡಿದ್ದಾಳೆ. ಡಾ. ಅಂಜಲಿ ಗಾರ್ಗ್ ಚಂಡೀಗಢದಲ್ಲಿರುವ ಶಾಲೆಯಿಂದ 10 ಮತ್ತು 12 ನೇ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. 10ನೇ ಬೋರ್ಡ್ ಪರೀಕ್ಷೆಯಲ್ಲಿ 10 ಸಿಜಿಪಿಎ ಪಡೆದಿದ್ದರು. 12 ನೇ ಪರೀಕ್ಷೆಯಲ್ಲಿ ಶೇ.96 ಅಂಕ ಪಡೆದಿದ್ದಾರೆ. ನಂತರ ಅವರು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ದೆಹಲಿಯಲ್ಲಿರುವ ವಿಎಂಎಂಸಿ ಮತ್ತು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದರು.
ವೈದ್ಯರಾದ ನಂತರ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು ಮತ್ತು ಅದರಲ್ಲಿಯೂ ಯಶಸ್ಸನ್ನು ಗಳಿಸಿದರು. ಬುಡಕಟ್ಟು ಹಿನ್ನೆಲೆಯಿಂದ ಬಂದ ಅಂಜಲಿ ಗರ್ಗ್ ಗೆ ಇದೆಲ್ಲವೂ ತುಂಬಾ ಕಷ್ಟಕರವಾಗಿತ್ತು. ಅಂಜಲಿ ಗರ್ಗ್ ಯುಪಿಎಸ್ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು. ಎರಡನೇ ಪ್ರಯತ್ನದಲ್ಲಿ 79ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು. 2022 ರ UPSC ಪರೀಕ್ಷೆಯಲ್ಲಿ 134 ಅಂಕಗಳನ್ನು ಗಳಿಸಿದರು. ವೈದ್ಯಕೀಯ ವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ಇಟ್ಟುಕೊಂಡಿದ್ದರು. ಅವರು UPSC CSE 2022 ರಲ್ಲಿ ವೈದ್ಯಕೀಯ ವಿಜ್ಞಾನದ ಟಾಪರ್ ಆಗಿದ್ದರು.