ಮಂಗಳೂರು: ನಮ್ಮ ಮಗ ಡ್ರಗ್ಸ್ ಎಡಿಕ್ಟ್ ಆಗಿದ್ದಾನೆ ಎಂದು ಹೆತ್ತವರೇ ಬಂದು ದೂರು ನೀಡಿದ ಆಧಾರದಲ್ಲಿ ಸಿಇಎನ್ ಕ್ರೈಂ ತಂಡದ ಪೊಲೀಸರು ಕಾರ್ಯಾಚರಣೆಗಿಳಿದು ಸುಮಾರು ಇನ್ನೂರು ಮಂದಿ ಉದ್ಯೋಗಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಐವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಆರು ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರಿಗೆ ಒವರ ಡ್ರಗ್ಸ್ ಪೂರೈಕೆಯ ಜಾಲ ಯಾವುದೆಂಬುವುದು ಕೂಡಾ ಅರಿವಿಗೆ ಬಂದಿದೆ.
ಈ ಪೋಷಕರ ರೀತಿ ಹತ್ತು ಮಂದಿ ಬಂದು ದೂರು ಕೊಟ್ಟರೆ ಎರಡು ಸಾವಿರ ಮಂದಿಗೆ ಡ್ರಗ್ಸ್ ಪೂರೈಕೆ ಆಗುವುದನ್ನು ತಪ್ಪಿಸಬಹುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.