ಸಾಲವಾಗಿ ಪಡೆದಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬೆಂಗಳೂರಿನ ವಿವೇಕ ನಗರದಲ್ಲಿ ಈ ಘಟನೆ ನಡೆದಿದೆ. ಸುಬ್ರಮಣಿ ಮನೆಗೆ ಬೆಂಕಿ ಹಚ್ಚಿದ ಆರೋಪಿ. ವೆಂಕಟರಮಣಿ ಎಂಬುವವರ ಬಳಿ ಆರೋಪಿಯ ಸಹೋದರಿ ಪಾರ್ವತಿ ತನ್ನ ಮಗಳ ಮದುವೆಗಾಗಿ 5 ಲಕ್ಷ ಸಾಲ ಪಡೆದುಕೊಂಡಿದ್ದರಂತೆ. ಹಲವು ವರ್ಷಗಳು ಕಳೆದರೂ ಸಾಲ ತೀರಿಸಿಲ್ಲ. ಇದರಿಂದ ವೆಂಕಟರಮಣಿ ತಾನು ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾರೆ.
ಹಣ ಕೇಳಿದ್ದಕ್ಕೆ ಮಹಿಳೆ ಪಾರ್ವತಿ ಹಾಗೂ ಆಕೆಯ ಮಗಳು ವೆಂಕಟರಮಣಿ ಬಳಿ ಜಗಳವಾಡಿದ್ದಾರೆ. ಇದೇ ವಿಚಾರವಾಗಿ ಸಿಟ್ಟಾದ ಸುಬ್ರಮಣಿ, ವೆಂಕಟರಮಣಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಅದೃಷ್ಟವಶಾತ್ ಮನೆಯಲ್ಲಿದ್ದವರು ಬಚಾವ್ ಆಗಿದ್ದಾರೆ. ವೆಂಕಟರಮಣಿ ಪುತ್ರ ವಿವೇಕ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.