ಬೆಂಗಳೂರು : ನಟ ದರ್ಶನ್ ತೂಗುದೀಪ ಅವರು ತಮ್ಮ ಫಾರ್ಮ್ಹೌಸ್ನಲ್ಲಿ ವಿದೇಶಿ ಬಾತುಕೋಳಿ ಸಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಎಫ್‌ಐಆರ್ ದಾಖಲು ಮಾಡಿತ್ತು. ಆ ಪ್ರಕರಣದ ವಿಚಾರಣೆಗೆ ಇಂದು (ಜುಲೈ 4) ಟಿ. ನರಸಿಪುರ ಕೋರ್ಟ್ಗೆ ದರ್ಶನ್ ಹಾಜರಾಗಬೇಕಿತ್ತು. ಆದರೆ ಇದೀಗ ಕೋರ್ಟ್ನಿಂದ ದರ್ಶನ್-ವಿಜಯಲಕ್ಷ್ಮೀ ದಂಪತಿಯ ವಿಚಾರಣೆ ಸೆಪ್ಟೆಂಬರ್ ೪ಕ್ಕೆ ಮುಂದೂಡಿಕೆಯಾಗಿದೆ.
ದರ್ಶನ್ ಅವರು ತಮ್ಮ ಫಾರ್ಮ್ಹೌಸ್ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದರು. ಹೀಗಾಗಿ ಅರಣ್ಯ ಇಲಾಖೆ 2 ವರ್ಷದ ಹಿಂದೆ ನೋಟಿಸ್ ನೀಡಿ ಎಫ್‌ಐಆರ್ ದಾಖಲಿಸಿತ್ತು. ವಿದೇಶಿ ಬಾತುಕೋಳಿ ಸಾಕಲು ಅನುಮತಿ ಪಡೆಯದ ಹಿನ್ನೆಲೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನಲ್ಲಿರುವ ಫಾರ್ಮ್ಹೌಸ್ನಲ್ಲಿ ದರ್ಶನ್ ಅವರು ಬಾರ್ ಹೆಡೆಡ್ ಗೂಸ್ ಬಾತುಕೋಳಿ ಸಾಕಿದ್ದರು.
ಈ ಬಗ್ಗೆ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ದರ್ಶನ್ ಮಾಹಿತಿ ನೀಡಿದ್ದಾಗ ವಿಷಯ ಬಹಿರಂಗ ಆಗಿತ್ತು. ದರ್ಶನ್, ಪತ್ನಿ ವಿಜಯಲಕ್ಷ್ಮೀ ಸೇರಿ ಮೂವರಿಗೆ ಅರಣ್ಯ ಇಲಾಖೆಯವರು ನೋಟಿಸ್ ನೀಡಿದ್ದರು. ತೋಟದ ಮ್ಯಾನೇಜರ್ ನಾಗರಾಜುಗೂ ನೋಟಿಸ್ ನೀಡಲಾಗಿತ್ತು.