ಚಿತ್ರದುರ್ಗ: ಗುರು ನಿಜವಾಗಿ ಬ್ರಹ್ಮನು, ರುದ್ರನು ಮಹಾ ವಿಷ್ಣು ಆಗಿದ್ಧಾನೆ. ಒಟ್ಟಾರೆ ಪರಮಾತ್ಮನ ಸ್ವರೂಪ ಗುರುವನ್ನು ಅಚಲ ನಿಷ್ಠೆಯಿಂದ ನಂಬಿದರೆ ಸಕಲ ವರಗಳನ್ನು ದಯಪಾಲಿಸುವನು ಗುರು ಒಲಿದರೆ ಹರಿಹರರೂ ಪ್ರಸನ್ನರಾಗುವರು ಗುರುಗಳ ಅನುಗ್ರಹವಿಲ್ಲದೆ ನಮ್ಮಿಂದ ಯಾವ ಸಾಧನೆಯೂ ಆಗದು ಎಂದು ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ರೋಟರಿ ಕ್ಲಬ್, ಚಿತ್ರದುರ್ಗ ಪೋಟ್ ರೋಟರಿ ಕ್ಲಬ್ ಹಾಗೂ ರೋಟರಿ ಕ್ಲಬ್ ಚಿನ್ಮೂಲಾದ್ರಿ ವತಿಯಿಂದ ಬುಧವಾರ ಸಂಜೆ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಗುರು ಪೂರ್ಣಿಮ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಗುರುವೇ ತಂದೆ, ಗುರುವೇ ತಾಯಿ, ಗುರುವೇ ಪರಶಿವನ ಸ್ವರೂಪನು ಒಂದು ವೇಳೆ ಶಿವನೇ ಸಿಟ್ಟಾದರೂ ಕೂಡ ಗುರು ಅವನನ್ನು ರಕ್ಷಿಸುವನು. ಆದರೆ ಗುರುವು ಕೋಪಗೊಂಡರೆ ಅವನನ್ನು ಯಾರು ರಕ್ಷಿಸಲಾರರು. ಗುರುವಿನ ಗುಲಾಮನಾಗುವ ತನಕ ನಾನು, ನನ್ನದು, ನನ್ನಿಂದಲೇ ಎಂಬ ಬಲೆಗಳಿಗೆ ಸಿಲುಕಿಕೊಂಡು ಈ ಭವ ಬಂದನದಿಂದ ಪಾರು ಮಾಡಲು ಒಬ್ಬ ಸಮರ್ಥ ಗುರು ಬೇಕು ಎಂದು ತಿಳಿಸಿದರು.
ಮಣ್ಣು ಬಿಟ್ಟು ಮಡಿಕೆಯಲ್ಲ ತನ್ನ ಬಿಟ್ಟು ದೇವರಿಲ್ಲ ಶರಣ ವಾಣಿಯಂತೆ ನಮ್ಮ ದೇಹವೆಂಬ ದೇಗುಲದೊಳಗೆ ಪರಮಾತ್ಮ ಅಪರೋಕ್ಷವಾಗಿ ಇದ್ದಾನೆ ಅಪರೋಕ್ಷವಾಗಿ ಇರುವಂತ ದೇವನನ್ನು ಪರೋಕ್ಷವಾಗಿ ದೇಗುಲದಲ್ಲಿ ಪರಮಾತ್ಮನ ಇರುವು ಕಣ್ಣಿಗೂ ಕಾಣುವುದಿಲ್ಲ ಕೈಗೂ ನಿಲ್ಕುವುದಿಲ್ಲ ಗುರು ತೋರಿಸದಲ್ಲದೆ ಕಾಣಿಸದ ಅಣ್ಣ ಸಾರೆ ಚೆಲ್ಲದ ಮುಕುತಿ ಎಂಬ ಶೂನ್ಯಪೀಠ ಅಲ್ಲಮಪ್ರಭುಗಳ ವಾಣಿಯಂತೆ ಶಿವಪತವ ನರಿವಡೆ ಗುರು ಪಥವು ಮೊದಲು ಎಂಬ ಬಸವಣ್ಣನವರ ನುಡಿಯಂತೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎನ್ನುವ ದಾಸರವಾಣಿಯಲ್ಲಿ ಗುರುವಿನ ಔನ್ನತ್ಯ ನಿರೂಪಿತವಾಗಿದೆ.
ವೈರಾಗ್ಯ ಇವುಗಳಿಗೆಲ್ಲಾ ಗುರುವೇ ಹೆಚ್ಚಿನವನು ಅವನನ್ನು ಪೂಜಿಸುವುದರಿಂದ, ಸುಲಭವಾಗಿ ನೆರವೇರುವವು ಪ್ರತಿಯೊಬ್ಬರು ಪಾರಮಾರ್ಥವನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಒಬ್ಬ ಶ್ರೇಷ್ಠ ತತ್ವಜ್ಞಾನಿಯಾಗಿರುವಂತಹ ಅಪರೋಕ್ತ ಅನುಭವಿಯಾಗಿರುವಂತ ಜಾತಿ ಮತ ಪಂಥಗಳ ಮೇರೆಯನ್ನು ಮೀರಿ ವಿಶ್ವವನ್ನು ಪ್ರೀತಿಸುವಂಥ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ ಗುರುವಿನ ಮಾರ್ಗದರ್ಶನದಿಂದಲ್ಲದೆ ತನ್ನನ್ನು ಜನ್ಮದಲ್ಲಿ ಗುರುವಿಲ್ಲದೆ ಜ್ಞಾನೋದಯವಾದರೆ ಹಿಂದಿನ ಜನ್ಮದಲ್ಲಿ ಗುರುವಿನ ಉಪದೇಶವಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಭಾಗ್ಯಲಕ್ಮಿ ಮೂರ್ತಿ, ಕಾರ್ಯದರ್ಶಿಯಾದ ಅನುರಾಧ ರೋಟರಿ ಕ್ಲಬ್ ಚಿತ್ರದುರ್ಗ ಪೋಟ್ನ ಅಧ್ಯಕ್ಷರಾದ ಶಶಿಧರ ಗುಪ್ತ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಚಂದ್ರಕಲಾ, ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷರಾದ ದಿಲ್ಷಾದ್ ಉನ್ನಿಸ ಭಾಗವಹಿಸಿದ್ದರು.