ಬೆಂಗಳೂರು: ಜು.14 ರಂದು ನಟ ದರ್ಶನ್ ಡೆವಿಲ್ ಚಿತ್ರದ ಬಾಕಿ ಇರುವ ಒಂದೇ ಒಂದು ಹಾಡಿನ ಶೂಟಿಂಗ್ಗಾಗಿ ಥೈಲ್ಯಾಂಡ್ ದೇಶಕ್ಕೆ ಹಾರಲಿದ್ದಾರೆ.
ಅಲ್ಲದೇ ವಿದೇಶಕ್ಕೆ ತೆರಳಲು ಅನುಮತಿಯನ್ನೂ ಪಡೆದುಕೊಂಡಿದ್ದಾರೆ. ಕೋರ್ಟ್ ಆದೇಶದಂತೆ ದರ್ಶನ್ ಸೋಮವಾರ ಥಾಯ್ಲೆಂಡ್ಗೆ ತೆರಳಲಿದ್ದಾರೆ. ಡೆವಿಲ್ ಚಿತ್ರದ ಡ್ಯುಯೆಟ್ ಹಾಡೊಂದರ ಚಿತ್ರೀಕರಣಕ್ಕೆ ಥೈಲ್ಯಾಂಡ್ ದೇಶದ ಬ್ಯಾಂಕಾಕ್, ಪುಕೆಟ್, ಕ್ರಾಬಿಯಲ್ಲಿ ದರ್ಶನ್ ಹಾಡಿನ ಚಿತ್ರೀಕರಣದಲ್ಲಿ ನಡೆಯಲಿದೆ. ಇದು ಕೊಲೆ ಪ್ರಕರಣದ ಬಳಿಕ ದರ್ಶನ್ ತೆರೆಳುತ್ತಿರುವ ಮೊದಲ ವಿದೇಶ ಪ್ರಯಾಣವಾಗಿದೆ. ಇದನ್ನೂ ಓದಿ: ವಾಕಿಂಗ್ ಮಾಡಲು ಹೋದ ವ್ಯಕ್ತಿ ಹೃದಯಾ*ಘಾತಕ್ಕೆ ಬ*ಲಿ ಸೋಮವಾರ ಟಿಕೆಟ್ ಬುಕ್ ಆಗಿದ್ದು ಸಿನಿಮಾ ಟೀಮ್ ಜೊತೆಗೂಡಿ ತೆರಳಲಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಅವರು ಪತಿ ಜೊತೆ ಹೋಗುವ ಸಾಧ್ಯತೆ ಇದೆ.