ಉಡುಪಿ: ಶಾಲಾ ಬಾಲಕನೋರ್ವ ಮನೆಯಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಆರನೇ ತರಗತಿಯ ವಿದ್ಯಾರ್ಥಿ ರ್ಯಾನ್ಸ್ ಕ್ಯಾಥಲ್ ಡಿಸೋಜಾ ಮೃತ ದುರ್ದೈವಿ.
ಆರೋಗ್ಯದಿಂದಿದ್ದ ಬಾಲಕ ಇದ್ದಕಿದ್ದಂತೆ ಮನೆಯಲ್ಲಿ ಕುಸಿದು ಬಿದ್ದಿದ್ದಾನೆ. ತೊಟ್ಟಂನ ಅಶ್ವಿನ್ ಮತ್ತು ಸರೀತಾ ಡಿಸೋಜಾ ದಂಪತಿಯ ಪುತ್ರನಾದ ಈತ ಹನ್ನೊಂದು ವರ್ಷದ ಬಾಲಕ.
ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.