ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಆ್ಯಂಕರ್ ಅನುಶ್ರೀ ಅವರ ಮದುವೆಯ ಸುದ್ದಿಯೇ ಸಖತ್ ವೈರಲ್ ಆಗ್ತಿದೆ. ಇದೀಗ ಇವರ ಮದ್ವೆ ಅಗಸ್ಟ್ ೨೮ಕ್ಕೆ ನಡೆಯಲಿದ್ದು ಅನುಶ್ರೀ-ರೋಷನ್ ಪರಸ್ಪರ ಪರಿಚಯವಾಗಲು ನಟ ಪುನೀತ್ ರಾಜ್‍ಕುಮಾರ್ ಅವರೇ ಕಾರಣ ಎನ್ನಲಾಗುತ್ತಿದೆ. ಅಷ್ಟಕ್ಕೂ ಇವರದ್ದು ಸಂಪೂರ್ಣ ಅರೇಂಜ್ ಮ್ಯಾರೇಜ್ ಅಲ್ಲ ಎನ್ನಲಾಗುತ್ತಿದೆ.
ಅನುಶ್ರೀ ಅವರಂತೆ ರೋಷನ್ ಕೂಡಾ ನಟ ಪುನೀತ್ ಅವರ ಅಪ್ಪಟ ಅಭಿಮಾನಿಯಂತೆ. ಪುನೀತ್ ನಿವಾಸದಲ್ಲಿ ಅನುಶ್ರೀ ಹಾಗೂ ರೋಷನ್ ಪರಿಚಯ ಆದರು. ಪುನೀತ್ ನಿರ್ಮಿಸಿದ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅವರು ನಿಧನ ಹೊಂದಿದ ಬಳಿಕ ರಿಲೀಸ್ ಆಯಿತು. ಇದರ ಪ್ರೀ ರಿಲೀಸ್ ಈವೆಂಟ್ನ ಪ್ಯಾಲೇಸ್ ಗ್ರೌಂಡ್ನಲ್ಲಿ ‘ಪುನೀತ ಪರ್ವ’ ಹೆಸರಲ್ಲಿ ಅಶ್ವಿನಿ ಅವರು ಆಯೋಜಿಸಿದ್ದರು. ಚಿತ್ರರಂಗದ ಹಲವರು ಇದರಲ್ಲಿ ಭಾಗಿ ಆಗಿದ್ದರು. ಈ ಈವೆಂಟ್ಗೆ ಆ್ಯಂಕರಿಂಗ್ ಮಾಡಿದ್ದು ಅನುಶ್ರೀ ಅವರು. ಈ ಈವೆಂಟ್ನ ನಿರ್ವಹಣೆಯಲ್ಲಿ ರೋಷನ್ ಭಾಗಿಯಾಗಿದ್ದರು. ಈವೆಂಟ್ನಲ್ಲಿ ಅನುಶ್ರೀ ಹಾಗೂ ರೋಷನ್ ಮಧ್ಯೆ ಹೆಚ್ಚು ಆಪ್ತತೆ ಬೆಳೆಯಿತು. ಒಬ್ಬರಿಗೊಬ್ಬರು ಕ್ಲೋಸ್ ಆದರು.
ಹಾಗೆ ಬೆಳೆದ ಆಪ್ತತೆ ಇದೀಗ ಮದುವೆಯವರೆಗೂ ಬೆಳೆದು ನಿಂತಿದೆ. ಶ್ರೀದೇವಿ ಹಾಗೂ ಯುವ ಅವರಿಗೆ ರೋಷನ್ ಆಪ್ತ ಸ್ನೇಹಿತ. ಒಟ್ಟಿನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಇವರಿಬ್ಬರೂ ವಿವಾಹವಾಗುತ್ತಿರೋದು ಅಭಿಮಾನಿಗಳಿಗೂ ಖುಷಿ ತಂದಿದೆ.