ಢಾಕಾ : ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಪತನಗೊಂಡು ಶಾಲಾ ಕಟ್ಟಡಕ್ಕೆ ಅಪ್ಪಳಿದ ದುರಂತಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.
ಸಾವನ್ನಪ್ಪಿದವರಲ್ಲಿ 25 ಮಕ್ಕಳಿದ್ದಾರೆ. ಸುಮಾರು 170 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಶಾಲೆಯ ಸಿಬ್ಬಂದಿ ಸೈದೂರ್ ರೆಹಮಾನ್ ಮಾಹಿತಿ ನೀಡಿದ್ದಾರೆ.
ಜುಲೈ 21ರ ಮಧ್ಯಾಹ್ನ 1:06ರ ಸುಮಾರಿಗೆ ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ಢಾಕಾದ ಉತ್ತರದ ಮೈಲ್‌ಸ್ಟೋನ್ ಶಿಕ್ಷಣ ಸಂಸ್ಥೆಯ ಕ್ಯಾಂಟೀನ್ ಮೇಲೆ ಪತನವಾಗಿತ್ತು.
ಪತನವಾದ ಎಫ್-7 ಬಿಜಿಐ ತರಬೇತಿ ವಿಮಾನವು ಬಾಂಗ್ಲಾದೇಶದ ನಿರ್ವಹಿಸುತ್ತಿರುವ 16 ವಿಮಾನಗಳ ಪೈಕಿ ಒಂದಾಗಿದೆ. ಇದು ಚೀನಾದ ಜೆ-7 ಯುದ್ಧ ವಿಮಾನದ ಮುಂದುವರಿದ ಆವೃತ್ತಿಯ ವಿಮಾನವಾಗಿದೆ ಎಂದು ತಿಳಿದುಬಂದಿದೆ.