ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2021 ರಿಂದ 2025ರ ಅವಧಿಯಲ್ಲಿ ಕೈಗೊಂಡಿದ್ದ ವಿದೇಶ ಪ್ರವಾಸಗಳಿಗೆ 362 ಕೋಟಿ ರೂ. ಖರ್ಚಾಗಿದೆ.
2025ರ ಒಂದೇ ವರ್ಷದಲ್ಲಿ ಅಮೆರಿಕ, ಫ್ರಾನ್ಸ್ ಸೇರಿ 5 ದೇಶಗಳ ಭೇಟಿಗೆ 67 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯ ಸಭೆಗೆ ಮಾಹಿತಿ ನೀಡಿದೆ.
ರಾಜ್ಯಸಭೆ ಕಲಾಪದಲ್ಲಿ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು, 2025 ರಲ್ಲಿ ಮೋದಿ ಅವರ ಅತಿ ದುಬಾರಿ ಪ್ರವಾಸವೆಂದರೆ ಫ್ರಾನ್ಸ್ ಭೇಟಿ. ಫ್ರಾನ್ಸ್ ಪ್ರವಾಸಕ್ಕೆ 25 ಕೋಟಿ ರೂ. ಖರ್ಚಾಗಿದೆ. ಅಮೆರಿಕ ಭೇಟಿಗೆ 16 ಕೋಟಿ ರೂ. ಖರ್ಚಾಗಿದೆ. ಮಾರಿಷಸ್, ಸೈಪ್ರೆಸ್, ಕೆನಡಾ ಪ್ರವಾಸದ ಲೆಕ್ಕ ಬಾಕಿ ಇದೆ ಎಂದು ಹೇಳಿದ್ದಾರೆ.