ನವದೆಹಲಿ: ಕೊರೋನಾ ಅವಧಿಯಲ್ಲಿ ಪ್ರಪಂಚದ 25 ಲಕ್ಷಕ್ಕೂ ಅಧಿಕ ಜನರ ಜೀವವನ್ನು ಕೊರೋನಾ ಲಸಿಕೆ ಕಾಪಾಡಿದೆ ಎಂದು ವರದಿಯೊಂದು ತಿಳಿಸಿದೆ.
ಇಟಲಿ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳು ಜಂಟಿಯಾಗಿ ನಡೆಸಿದ ಈ ಅಧ್ಯಯನದಲ್ಲಿ ಪ್ರತಿ 5,400 ಡೋಸ್‌ಗಳಿಗೆ ಒಂದು ಸಾವನ್ನು ತಪ್ಪಿಸಲಾಗಿದೆ. ಕೊರೋನಾ ಲಸಿಕೆಗಳ ಕಾರಣದಿಂದ ಹೆಚ್ಚಿನ ಪ್ರಮಾಣದಲ್ಲಿ ಹಿರಿಯರ ಸಾವಿನ ಪ್ರಮಾಣವನ್ನು ತಪ್ಪಿಸಲಾಗಿದೆ ಎಂದು ಈ ವರದಿ ಹೇಳಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಜರ್ನಲ್ ಒಂದರಲ್ಲಿ ಈ ವರದಿ ಪ್ರಕಟವಾಗಿದೆ.
ಇನ್ನು ಕೊರೋನಾ ಲಸಿಕೆಯ ಕಾರಣಕ್ಕೆ ಹೃದಯಾಘಾತವಾಗುತ್ತಿಲ್ಲ ಎನ್ನುವ ಅಂಶವನ್ನು ಕೇಂದ್ರ ಆರೋಗ್ಯ ಸಚಿವರು ಲೋಕಸಭೆಗೆ ತಿಳಿಸಿದ್ದಾರೆ. ಹೃದಯಾಘಾತ ಹಲವಾರು ಕಾರಣಕ್ಕೆ ಸಂಭವಿಸುತ್ತದೆ. ಈ ಬಗ್ಗೆ ICMR ದೇಶದ ಪ್ರಮುಖ ಆಸ್ಪತ್ರೆಗಳನ್ನು ಒಳಗೊಂಡಂತೆ ಅಧ್ಯಯನ ನಡೆಸುರುವುದಾಗಿಯೂ ಅವರು ಹೇಳಿದ್ದಾರೆ.