ಧರ್ಮಸ್ಥಳ: ರಾಜ್ಯ, ದೇಶದಲ್ಲೇ ಸಂಚಲನ ಸೃಷ್ಟಿಸಿದ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅಕ್ರಮ ಶವಗಳನ್ನು ಹೂತಿಟ್ಟ ಬಗ್ಗೆ ದಿನೆ ದಿನೆ ಅನೇಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಬರುತ್ತಿದ್ದು ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿವೆ.
ಅನಾಮಿಕ ಹೇಳಿದ ಆಧಾರದ ಮೇಲೆ SIT ತಂಡವು ತನಿಖೆಗೆ ಇಳಿದಿರುವುದು ನಮಗೆಲ್ಲ ತಿಳಿದಿರುವ ಸತ್ಯ. ಇದನ್ನೇ ಬಂಡವಾಳವಾಗಿ ಅನೇಕ ಮಾದ್ಯಮಗಳು ಮೂಳೆ, ಬುರುಡೆ ಸಿಕ್ಕಿವೆ, ಬ್ಯಾಗ್, ATM ಕಾರ್ಡ್ , ಬಟ್ಟೆ ಹೀಗೆ ಶೋಧಕಾರ್ಯದಲ್ಲಿ ಅನೇಕ ವಸ್ತು ಸಿಕ್ಕಿವೆ ಎಂಬ ವರದಿ ಪ್ರಸಾರ ಮಾಡುತ್ತಿವೆ.
ಧರ್ಮಸ್ಥಳ ಗ್ರಾಮದಲ್ಲಿ ತನಿಖೆಗೆ ಇಳಿದಿರುವ SIT ತಂಡವು ಇದುವರೆಗೆ ತಮ್ಮ ತನಿಖಾ ಮಾಹಿತಿಯು ಮಾದ್ಯಮ ಬಳಿ ಹೇಳಿಲ್ಲ. ಹೀಗಾಗಿ ನಾಗರಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೂಡದೆ SIT ತಂಡವು ತನಿಖಾ ವರದಿಯನ್ನು ನ್ಯಾಯಲಯಕ್ಕೆ ಸಲ್ಲಿಸಿ ನ್ಯಾಯಾಲಯದ ತೀರ್ಪಿನ ಬಳಿಕವೇ ಸತ್ಯ ಹೊರಬರಲಿದೆ.