ನವದೆಹಲಿ: ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣ ದಂಡನೆ ಶಿಕ್ಷೆಯನ್ನು ಯೆಮನ್ ಸರ್ಕಾರ ರದ್ದು ಮಾಡಿಲ್ಲ ಬದಲಾಗಿ ಮುಂದೂಡಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.
ಇದೊಂದು ಸೂಕ್ಷ್ಮ ವಿಷಯವಾಗಿದ್ದು, ಇನ್ನೂ ದೃಢೀಕರಣವಾಗದ ವಿಷಯದ ಬಗ್ಗೆ ಹರಡುತ್ತಿರುವ ವದಂತಿಯ ಕುರಿತು ಎಚ್ಚರಿಕೆ ವಹಿಸುವಂತೆ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಯೆಮನ್ ಅಧಿಕಾರಿಗಳು ಮತ್ತು ಇತರ ಮಿತ್ರ ರಾಷ್ಚ್ರಗಳು ಭಾರತಕ್ಕೆ ಸಹಕರಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.
ಯೆಮನ್ ಸರ್ಕಾರದ ಜೊತೆಗೆ ಭಾರತ ನಿರಂತರ ಮಾತುಕತೆ ನಡೆಸಿದ್ದು, ಅದರ ಫಲವಾಗಿ ಜು. 16 ರಂದು ನಿಗದಿ ಮಾಡಲಾಗಿದ್ದ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದೆ. ಆದರೆ ಅದನ್ನು ರದ್ದು ಮಾಡಲಾಗಿದೆ ಎನ್ನುವುದು ಸತ್ಯ ವಿಷಯ ಅಲ್ಲ. ಈ ಬಗ್ಗೆ ಸಚಿವಾಲಯ ಸ್ಪಷ್ಟನೆ ನೀಡುವ ವರೆಗೂ ತಾಳ್ಮೆ ವಹಿಸುವಂತೆ ಸಚಿವಾಲಯ ಹೇಳಿದೆ.