ಖತರ್ನಾಕ್ ಲೇಡಿ ಬರೋಬ್ಬರಿ 8 ಮದುವೆಯಾಗಿದ್ದಾಳೆ. ಅಲ್ಲದೇ ಇನ್ನೇನು 9ನೇ ಮದುವೆ ಆಗಬೇಕು ಅನ್ನುವಷ್ಟರಲ್ಲಿ ಸಿಕ್ಕಿಬಿದ್ದಿದ್ದಾಳೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಒಬ್ಬರಲ್ಲಾ, ಇಬ್ಬರಲ್ಲ ಬರೋಬ್ಬರಿ ಎಂಟು ಪುರುಷರನ್ನು ಒಂದಾದ ಮೇಲೆ ಒಂದರಂತೆ ಮದುವೆಯಾಗಿ ಪಂಗನಾಮ ಹಾಕಿದ್ದಾಳೆ ಈ ಕಿಲಾಡಿ ಮಹಿಳೆ. ಮದುವೆ ಆಗೋದಲ್ಲದೇ ಲಕ್ಷಾಂತರ ರೂಪಾಯಿಗಳನ್ನು ಸುಲಿಗೆ ಮಾಡಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಆರೋಪಿ ಸಮೀರಾ ಫಾತಿಮಾ ಅವರನ್ನು ಬಂಧಿಸಿದಾಗ, ಅವರು ತಮ್ಮ ಮುಂದೆ ಯಾರನ್ನು ಮದುವೆ ಆಗ್ಲಿ ಅಂತ ಹುಡುಕುತ್ತಿದ್ದರು. 9ನೇ ಪುರಷನನ್ನು ಭೇಟಿಯಾಗುತ್ತಿದ್ದಾಗ ಈಕೆ ಸಿಕ್ಕಿಬಿದ್ದಿದ್ದಾಳೆ. ಪೊಲೀಸರ ಆರಂಭಿಕ ತನಿಖೆಯಲ್ಲಿ ಆರೋಪಿ ವಧು ತನ್ನ ಗಂಡಂದಿರನ್ನು ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಸದ್ಯ ಸಮೀರಾ ಫಾತಿಮಾ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಸಮೀರಾ ಫಾತಿಮಾ ತನ್ನ ಬೇರೆ ಬೇರೆ ಗಂಡಂದಿರಿಂದ ಹಣ ಸುಲಿಗೆ ಮಾಡಲು ಒಂದು ಗ್ಯಾಂಗ್ ಜೊತೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಸಮೀರಾ ವಿದ್ಯಾವಂತಳಾಗಿದ್ದು, ವೃತ್ತಿಯಲ್ಲಿ ಶಿಕ್ಷಕಿ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.