ಇತ್ತೀಚೆಗೆ ಮಹಿಳೆಯೊಬ್ಬರ ಶವ ಫ್ರೀಜರ್ ನಲ್ಲಿಟ್ಟಿರುವ ಭಯಾನಕ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,
ಅಸ್ಸಾಂನಲ್ಲಿ ಮುಸ್ಲಿಂ ಯುವಕನೊಬ್ಬ ತನ್ನ ಗೆಳೆಯರೊಂದಿಗೆ ಸೇರಿ ಹಿಂದೂ ಗೆಳತಿಯನ್ನು ಅತ್ಯಾಚಾರವೆಸಗಿ ಹತ್ಯೆಗೈದು ಶವವನ್ನು ಫ್ರಿಜರ್
ನಲ್ಲಿ ಇಟ್ಟಿದ್ದಾರೆ ಎಂಬ ಸುದ್ದಿ ಹರಡಲಾಗಿತ್ತು. ಆದರೆ ಪಿಟಿಐ ಫ್ಯಾಕ್ಟ್ ಚೆಕ್ ಪರಿಶೀಲನೆ ಮಾಡಿದಾಗ ಈ ಚಿತ್ರ 2010ರಲ್ಲಿ ಬ್ರೆಜಿಲ್ ನ
ಓಸಾಸ್ಕೋ ಪಟ್ಟಣದಲ್ಲಿ ನಡೆದ ಹತ್ಯೆ ಪ್ರಕರಣದ್ದು ಎಂದು ದೃಢಪಟ್ಟಿದೆ.
ಅಸ್ಸಾಂ ಪ್ರಕರಣ ಎಂಬುದು ಸುಳ್ಳು, ದ್ವೇಷ ಹಬ್ಬಿಸುವ ನಕಲಿ ಸುದ್ದಿಯಾಗಿದೆ.