ಯಾದಗಿರಿ: ದೂರುದಾರರಿಂದ ಫೋನ್ ಪೇ ನಲ್ಲಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಯಾದಗಿರಿ ತಾಲೂಕಿನ ಗುರುಮಠಕಲ್ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ಟೇಬಲ್ ಗಳನ್ನು ಅಮಾನತ್ತು ಮಾಡಲಾಗಿದೆ.
ಅಮಾನತುಗೊಂಡವರು. ವಿಶ್ವನಾಥ ರೆಡ್ಡಿ ಮತ್ತು ಗೋಪಾಲ ರೆಡ್ಡಿ. ಇತ್ತೀಚೆಗೆ ಹಲ್ಲೆ ಪ್ರಕರಣವೊಂದರಲ್ಲಿ ಐವರನ್ನು ಬಂಧಿಸಲು ದೂರುದಾರರಿಂದ ತಲಾ 10 ಸಾವಿರ ರೂ.ಗಳನ್ನು ಫೋನ್ ಮೂಲಕ ಪಡೆದಿದ್ದರು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಡಿವೈಎಸ್ಪಿಗೆ ಸೂಚನೆ ನೀಡಲಾಗಿತ್ತು. ಡಿವೈಎಸ್ಪಿ ನೀಡಿದ ವರದಿ ಆಧಾರದ ಮೇಲೆ ಇಬ್ಬರನ್ನು ಎಸ್ಪಿ ಪೃಥ್ವಿಕ್ ಶಂಕರ್ ಅಮಾನತು ಮಾಡಿ ಆದೇಶಿಸಿದ್ದಾರೆ.