ಉಡುಪಿ: ನಗರದ ವಿವಿಧೆಡೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ನೋ ಪಾರ್ಕಿಂಗ್ ಮಾಡಲಾಗಿದ್ದು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ಲಾಕ್ ಹಾಕಿ ದಂಡ ವಸೂಲು ಮಾಡಲು ಇದೀಗ ಮುಂದಾಗಿದ್ದಾರೆ. ಆದ್ದರಿಂದ ವಾಹನ ಪ್ರಯಾಣಿಕರು ಸ್ವಲ್ಪ ಅಲರ್ಟ್ ಆಗಿದ್ರೆ ಒಳ್ಳೆಯದು.
ಈಗಾಗಲೇ ಸರ್ವಿಸ್ ಬಸ್ ತಂಗುದಾಣ, ಸಿಟಿಬಸ್ ತಂಗುದಾಣದ ಬಳಿ ಹಲವಾರು ವಾಹನಗಳಿಗೆ ಸೋಮವಾರ ಲಾಕ್ ಅಳವಡಿಕೆ ಮಾಡಿ ಬಿಸಿ ಮುಟ್ಟಿಸಲಾಗಿದೆ. ನಿಗದಿಪಡಿಸಿದ ಪಾರ್ಕಿಂಗ್ನಲ್ಲಿ ಸ್ಥಳಾವಕಾಶ ಇದ್ದರೂ ಎಲ್ಲೆಂದರಲ್ಲಿ ನಿಲ್ಲಿಸುವ ಘಟನೆಗಳು ನಡೆಯುತ್ತಿವೆ.
ಅಲ್ಲದೆ ಬೆಳಗ್ಗಿನಿಂದ ಸಂಜೆಯವರೆಗೂ ವಾಹನಗಳನ್ನು ನಿಲ್ಲಿಸಿ ಹೋಗುವುದು ಸುಗಮ ಸಂಚಾರಕ್ಕೆ ಅನುಕೂಲವಾಗುವ ಕಾರಣಕ್ಕೆ ಲಾಕ್ ಅಳವಡಿಕೆ ಮಾಡಲಾಗುತ್ತಿದೆ ಎಂದು ಸಂಚಾರ ಠಾಣೆಯ ಪೊಲೀಸರು ಹೇಳುತ್ತಾರೆ. ಜಿಲ್ಲಾ ಪೊಲೀಸ್ ಇಲಾಖೆಯು ಹೊಸ ಟೋಯಿಂಗ್ ವಾಹನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.