ರಾಯ್ಪುರ್: ಅರ್ಸಿಬಿ ನಾಯಕ ರಜತ್ ಪಾಟೀದಾರ್ರ ಹಳೆಯ ಸಿಮ್ ಸಂಖ್ಯೆ ತಾಂತ್ರಿಕ ಸಮಸ್ಯೆಯಿಂದಾಗಿ ಛತ್ತೀಸ್ಗಢದ ಯುವಕನೋರ್ವನಿಗೆ ಲಭ್ಯವಾಗಿದ್ದು, ಆತನಿಗೆ ವಿರಾಟ್ ಕೊಹ್ಲಿ, ಎಬಿಡಿವಿಲಿಯರ್ಸ್ ಹಾಗೂ ಯಶ್ ದಯಾಳ್ರಂತಹ ಘಟಾನುಘಟಿ ಕ್ರಿಕೆಟಿಗರು ಕರೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಕ್ರಿಕೆಟ್ ಆಟಗಾರರಿಂದ ಮಡಗಾಂವ್ ಗ್ರಾಮದ ನಿವಾಸಿ ಮನೀಶ್ ಬಿಸಿ (21) ಎಂಬ ಯುವಕ ಕರೆ ಸ್ವೀಕರಿಸಲು ಆರಂಭಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಆರು ತಿಂಗಳಿನಿಂದ ನಿಷ್ಕ್ರಿಯವಾಗಿದ್ದ ಈ ಸಂಖ್ಯೆಯನ್ನು ಸಾಮಾನ್ಯ ಪ್ರಕ್ರಿಯೆಯಂತೆ ಮನೀಶ್ ಬಿಸಿಗೆ ಮರು ಮಂಜೂರು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರಖೇಚಾ ತಿಳಿಸಿದ್ದಾರೆ.
ಅದು ವಾಟ್ಸ್ ಆ್ಯಪ್ ಸಂಖ್ಯೆಯಾಗಿತ್ತು ಹಾಗೂ ಕಳೆದ ಆರು ತಿಂಗಳಿನಿಂದ ಬಹುಶಃ ಬಳಸಿರಲಿಲ್ಲ. ಕಂಪನಿಯ ನಿಯಮಗಳ ಪ್ರಕಾರ, ಆರು ತಿಂಗಳ ಕಾಲ ಆ ಸಂಖ್ಯೆ ಬಳಕೆಯಾಗದೆ ನಿಷ್ಕ್ರಿಯವಾಗಿದ್ದುದರಿಂದ, ಅದನ್ನು ಮತ್ತೊಬ್ಬ ಗ್ರಾಹಕರಿಗೆ ಮಂಜೂರು ಮಾಡಲಾಗಿದೆ. ಇದರಿಂದಾಗಿ ಈ ಸಿಮ್ ಸಂಖ್ಯೆ ದೇವ್ಬಾಗ್ನ ಯುವಕನಿಗೆ ಮಂಜೂರಾಗಿದೆ. ನಾವೀಗ ಈ ಸಂಖ್ಯೆಯನ್ನು ಕ್ರಿಕೆಟಿಗ ರಜತ್ ಪಾಟೀದಾರ್ ಅವರಿಗೆ ಮರಳಿಸಿದ್ದೇವೆ” ಎಂದೂ ಅವರು ಹೇಳಿದ್ದಾರೆ.
ಮನೀಶ್ ಬಿಸಿ ಕಳೆದ ಜೂನ್ ತಿಂಗಳಲ್ಲಿ ಮೊಬೈಲ್ ಅಂಗಡಿಯಿಂದ ಹೊಸ ಸಿಮ್ ಖರೀದಿಸಿದ್ದರು. ಒಂದು ವಾರದ ನಂತರ, ಆತನ ಸ್ನೇಹಿತ ಖೇಮ್ ರಾಜ್ ವಾಟ್ಸ್ ಆ್ಯಪ್ ಅಳವಡಿಸಿಕೊಳ್ಳಲು ಆತನಿಗೆ ನೆರವು ನೀಡಿದ್ದರು. ಈ ವೇಳೆ ಪ್ರೊಫೈಲ್ ಚಿತ್ರವು ಸ್ವಯಂಚಾಲಿತವಾಗಿ ರಜತ್ ಪಾಟೀದಾರ್ರ ಚಿತ್ರವನ್ನು ಪ್ರದರ್ಶಿಸಿತ್ತು. ಇದು ತಾಂತ್ರಿಕ ಸಮಸ್ಯೆ ಇರಬಹುದು ಎಂದು ಅವರು ಮೊದಲಿಗೆ ಭಾವಿಸಿದ್ದರು ಎನ್ನಲಾಗಿದೆ.
ಆದರೆ, ಶೀಘ್ರದಲ್ಲೇ ಕೊಹ್ಲಿ, ಎಬಿಡಿವಿಯರ್ಸ್ ಹಾಗೂ ಇನ್ನಿತರ ಆಟಗಾರರ ಹೆಸರಿನಲ್ಲಿ ಮನೀಶ್ಗೆ ಕರೆಗಳು ಬರಲು ಪ್ರಾರಂಭಿಸಿದವು. ಅವರೆಲ್ಲ ಮನೀಶ್ನನ್ನು ರಜತ್ ಎಂದು ಸಂಬೋಧಿಸುತ್ತಿದ್ದರು ಎಂದು ಹೇಳಲಾಗಿದೆ. ಇದು ಪ್ರ್ಯಾಂಕ್ ಇರಬಹುದು ಎಂದು ಭಾವಿಸಿರುವ ಮನೀಶ್, ಸುಮಾರು 15 ದಿನಗಳ ಕಾಲ ಆ ಕರೆಗಳೊಂದಿಗೆ ಸಂವಾದ ನಡೆಸಿದ್ದಾನೆ ಎಂದು Times of India ವರದಿ ಮಾಡಿದೆ.
ಆದರೆ, ತನ್ನ ಸಂಖ್ಯೆಗೆ ಪ್ರವೇಶ ಪಡೆಯಲು ಸಾಧ್ಯವಾಗದೆ ರಜತ್ ಪಾಟೀದಾರ್ ಮಧ್ಯಪ್ರದೇಶ ಸೈಬರ್ ಸೆಲ್ ಅನ್ನು ಸಂಪರ್ಕಿಸಿದಾಗ ಈ ವಿಷಯ ಗಂಭೀರ ಸ್ವರೂಪಕ್ಕೆ ತಿರುಗಿದೆ. ಮಧ್ಯಪ್ರದೇಶ ಸೈಬಲ್ ಸೆಲ್ ಪೊಲೀಸರು ನಂತರ ಗರಿಯಾಬಂದ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸ್ ತಂಡವೊಂದು ಮನೀಸ್ ಬಿಸಿ ಗ್ರಾಮಕ್ಕೆ ಭೇಟಿ ನೀಡಿದ್ದು, ಅವರಿಗೆ ಮಂಜೂರಾಗಿದ್ದ