ಉತ್ತರ ಪ್ರದೇಶ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಠಿಣ ಪರಿಶ್ರಮ, ಛಲ, ದೃಢ ಸಂಕಲ್ಪ ಅಗತ್ಯ. ಹೀಗೆ ತಮ್ಮ ಮೂರನೇ ಪ್ರಯತ್ನದಲ್ಲಿ ಉತ್ತೀರ್ಣರಾದ ಆಶ್ನಾ ಚೌಧರಿ ಅವರ ಯಶೋಗಾಥೆ ಇದು.
ಆಶ್ನಾ ಅವರು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಪಿಲ್ಖುವಾದಲ್ಲಿ ಜನಿಸಿದರು. ತಮ್ಮ ಶಿಕ್ಷಣವನ್ನು ಪಿಲ್ಖುವಾದ ಸೇಂಟ್ ಕ್ಸೇವಿಯರ್ಸ್ ಶಾಲೆ, ಉದಯಪುರದ ಸೇಂಟ್ ಮೇರೀಸ್ ಶಾಲೆ, ಮತ್ತು ಗಾಜಿಯಾಬಾದ್‌ನ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಪೂರೈಸಿದರು. ಅವರು 12ನೇ ತರಗತಿಯಲ್ಲಿ 96.5% ಅಂಕಗಳನ್ನು ಗಳಿಸಿದರು.
ಆಶ್ನಾ ಅವರು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್‌ನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಗೌರವ ಪದವಿ ಪಡೆದರು. ನಂತರ ನವದೆಹಲಿಯ ಸೌತ್ ಏಷಿಯನ್ ಯೂನಿವರ್ಸಿಟಿಯಿಂದ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಪದವಿ ನಂತರವೇ ಆಶ್ನಾ ಅವರ ಯುಪಿಎಸ್‌ಸಿ ಪ್ರಯಾಣ ಪ್ರಾರಂಭವಾಯಿತು. ಅವರು 2020 ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದರು. ಆದರೆ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಬಳಿಕ ಎರಡನೇ ಬಾರಿ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾದರು. ಆದರೆ 2.5 ಅಂಕಗಳಿಂದ ಅವರು ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ.
ಬಳಿಕ 2022ರಲ್ಲಿ ಮೂರನೇ ಬಾರಿಗೆ ಆಶ್ನಾ ಅವರು ಯುಪಿಎಸ್‌ಸಿ ಪರೀಕ್ಷೆ ಬರೆದು, 116ನೇ ಅಖಿಲ ಭಾರತ ರ‍್ಯಾಂಕ್ ಗಳಿಸಿದರು. ಆ ಮೂಲಕ ಐಪಿಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾದರು.