ಉಡುಪಿ: ನಡುರಾತ್ರಿ ವ್ಯಕ್ತಿಯೋರ್ವನನ್ನು ಸ್ನೇಹಿತರೇ ಮನೆಗೆ ನುಗ್ಗಿ ಪತ್ನಿ, ತಾಯಿ ಹಾಗೂ ಮಗುವಿನ ಎದುರೇ ಬರ್ಬರವಾಗಿ ಹತ್ಯೆಗೈದ ಘಟನೆ ಪುತ್ತೂರಿನ ಸುಬ್ರಹ್ಮಣ್ಯ ನಗರದ ಲಿಂಗೋಟ್ಟುಗುಡ್ಡೆಯಲ್ಲಿ ನಡೆದಿದೆ.
ಪೈಂಟಿಂಗ್ ವೃತ್ತಿಯ ವಿನಯ್ ದೇವಾಡಿಗ (40) ಹತ್ಯೆಗೀಡಾದ ವ್ಯಕ್ತಿ. ಇತ ಎಂದಿನಂತೆ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಸಂದರ್ಭದಲ್ಲಿ ಮಂಗಳವಾರ ರಾತ್ರಿ 11.45 ಸುಮಾರಿಗೆ ಜೋರಾಗಿ ಮನೆಯ ಬಾಗಿಲು ಬಡಿದ್ದಾರೆ. ಭಯಗೊಂಡ ಪತ್ನಿ ಮನೆಯ ತೆರೆದಾಗ ವಿನಯ್ ಇದ್ದಾನ ಎಂದು ಕೇಳಿದ್ದಾರೆ. ತಕ್ಷಣ ಮೂವರು ಮಾರಕಾಸ್ತ್ರದಿಂದ ಬೆಡ್ ರೂಮ್‌ಗೆ ನುಗ್ಗಿ ವಿನಯ್ ಗೆ ದಾಳಿ ಮಾಡಿದ್ದಾರೆ. ಇದನ್ನು ತಡೆಯಲು ಬಂದ ಪತ್ನಿಗೂ ಗಾಯವಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.