ಚಿತ್ರದುರ್ಗ: ಹಿರಿಯೂರು ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇದೇ ಆಗಸ್ಟ್ 21ರಂದು “ವೈಜ್ಞಾನಿಕ ಅಣಬೆ ಬೇಸಾಯ ಹಾಗೂ ಅಣಬೆಯ ಮೌಲ್ಯವರ್ಧಿತ ಉತ್ಪನ್ನಗಳ” ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ತರಬೇತಿಯಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು ತರಬೇತಿ ಶುಲ್ಕ ಒಟ್ಟು ರೂ.250/-ಗಳನ್ನು ಪಾವತಿಸಿ ಇದೇ ಆಗಸ್ಟ್ 19ರೊಳಗೆ ದೂರವಾಣಿ ಮುಖಾಂತರ ಅಥವಾ ಖುದ್ದಾಗಿ ಡಾ.ಸರಸ್ವತಿ ಜೆ.ಎಂ.,(ಗೃಹ ವಿಜ್ಞಾನಿ), ಕೃಷಿ ವಿಜ್ಞಾನ ಕೇಂದ್ರ, ಬಬ್ಬೂರು ಫಾರಂ, ಹಿರಿಯೂರು, ಮೊಬೈಲ್ ಸಂಖ್ಯೆ9986647124 ಗೆ ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಬಹುದಾಗಿದೆ. ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.