ಬೆಂಗಳೂರು: ನಾಗಮೋಹನದಾಸರವರ ಜನಗಣತಿ ಲೋಪ ಸರಿಪಡಿಸಿ ಜನಸಂಖ್ಯಾವಾರು ಪ್ರತ್ಯೇಖ ಮೀಸಲಾತಿ ನೀಡಲು ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿಸಿದ್ಧರಾಮೇಶ್ವರ ಸ್ವಾಮೀಜಿರವರ ನಿಯೋಗ ಭೇಟಿ ಮಾಡಿ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಸಚಿವ ಸಪುಂಟದಲ್ಲಿ ತಮ್ಮ ಮನವಿಯನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಭೋವಿ ಜನಾಂಗದ ಜನಸಂಖ್ಯೆಯ ನ್ಯೂನ್ಯತೆಗಳು ಸದರಿ ವರದಿಯಲ್ಲಿ ಪುಟ ಸಂಖ್ಯೆ 24ರಲ್ಲಿ ತಿಳಿಸಿರುವಂತೆ 2001-11 ರ ಜನಸಂಖ್ಯೆಯ ದಶಕವಾರು ಬೆಳವಣಿಗೆಯ ಪ್ರಮಾಣ 22.31% ರಷ್ಟಿದೆ. ಇದೇ ಮಾನದಂಡವನ್ನು 2011-2025 ಅಂದರೆ 15 ವರ್ಷಗಳ ನಂತರದ ಜನಸಂಖ್ಯೆ ಕೆಳಕಂಡಂತಾಗಬೇಕು.
ಪುಟ ಸಂಖ್ಯೆ 51ರಲ್ಲಿ ಸದಾಶಿವ ಆಯೋಗ ಹಾಗೂ 2011ರ ಜನಗಣತಿಯಲ್ಲಿ ಎರಡೂ ಸಮೀಕ್ಷೆ ಏಕಕಾಲದಲ್ಲಿ ನಡೆದರೂ ಸಹ ಪರಿಶಿಷ್ಟ ಜಾತಿ ಜನಸಂಖ್ಯೆ ವಿಚಾರದಲ್ಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ಇದೆ ಎಂದು ನ್ಯಾಯಮೂರ್ತಿಗಳು ತಿಳಸಿ, ಈ ಕಾರಣದಿಂದಗಿ ಹೊಸದಾಗಿ ಸಮೀಕ್ಷೆ ನಡೆಯಬೇಕಾಗಿದೆ ಎಂದು ಹೇಳಿರುವಾಗ ಪ್ರಸ್ತುತ ಲೋಪದೋಷಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ 2026ರ ಜನಗಣತಿ ಆಗುವವರೆವಿಗೂ ಕಾಯುವುದು ಸೂಕ್ತಎಂದು ಮುಖ್ಯ ಮಂತ್ರಿಗಳಿಗೆ ಹೇಳಿದರು.
ನಿಯೋಗದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ, ವಿ ಹನುಮಂತಪ್ಪ, ರವಿ ಪೂಜಾರಿ, ಜಯಶಂಕರ, ಮುರಳಿಧರ ಬಂಡೆ, ಶ್ರೀಮತಿ ಮಂಜುಳ, ಶ್ರೀಮತಿ ಗೀತಾ, ತಿಪ್ಪಣ್ಣ ಒಡೆಯರಾಜು, ಕೃಷ್ಣಪ್ಪ ಹಾಗೂ ಇನ್ನಿತರರಿದ್ದರು.