ನವದೆಹಲಿ: ಭಾರತ ಮತ್ತು ಚೀನಾ ಗಡಿಯ ನಿರ್ದಿಷ್ಟ ಪ್ರದೇಶಗಳಲ್ಲಿ ವ್ಯಾಪಾರ ಪುನರಾರಂಭಿಸುವ ಚಿಂತನೆ ಪ್ರಾರಂಭವಾಗಿದೆ. 2020ರಿಂದ ಸ್ಥಗಿತಗೊಂಡಿರುವ ಸ್ಥಳೀಯವಾಗಿ ತಯಾರಿಸಿದ ಸರಕುಗಳ ಗಡಿ ವ್ಯಾಪಾರವನ್ನು ಮತ್ತೆ ಪ್ರಾರಂಭಿಸಲು ಎರಡೂ ದೇಶಗಳ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಇದು ಪ್ರಾರಂಭವಾದರೆ ಐದು ವರ್ಷಗಳ ಬಳಿಕ ಮತ್ತೆ ಭಾರತ ಮತ್ತು ಚೀನಾದ ಗಡಿಯಲ್ಲಿ ವ್ಯಾಪಾರ ವಹಿವಾಟುಗಳು ಪುನರಾರಂಭವಾಗಲಿದೆ. ಇದರಿಂದ ಎರಡು ದೇಶಗಳ ನಡುವಿನ ಉದ್ವಿಗ್ನತೆಯು ಕಡಿಮೆಯಾಗಬಹುದು ಎನ್ನುತ್ತಾರೆ ಭಾರತೀಯ ಅಧಿಕಾರಿಗಳು.
ಭಾರತ ಮತ್ತು ಚೀನಾ ಸ್ಥಳೀಯವಾಗಿ ತಯಾರಿಸಿದ ಸರಕುಗಳ ಗಡಿ ವ್ಯಾಪಾರವನ್ನು ಮತ್ತೆ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಮೂಲಕ ಭಾರತ ಮತ್ತು ಚೀನಾ ದೀರ್ಘಕಾಲದ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಹೆಜ್ಜೆಯನ್ನು ಇಡುತ್ತಿದೆ. ಈಗಾಗಲೇ ಗಡಿಯಲ್ಲಿ ಗೊತ್ತುಪಡಿಸಿದ ಸ್ಥಳಗಳ ಮೂಲಕ ವ್ಯಾಪಾರವನ್ನು ಪುನರಾರಂಭಿಸಲು ಎರಡೂ ಕಡೆಯವರು ಪ್ರಸ್ತಾಪಿಸಿದ್ದಾರೆ ಮತ್ತು ಈ ವಿಷಯವು ಪ್ರಸ್ತುತ ಎರಡು ರಾಷ್ಟ್ರಗಳ ನಡುವೆ ಚರ್ಚೆಯಲ್ಲಿದೆ.