ಚಿತ್ರದುರ್ಗ : ಧರ್ಮಸ್ಥಳ ವಿಚಾರದಲ್ಲಿ ಸಿದ್ದರಾಮಯ್ಯ ಹಿಂದೆ ಟಿಪ್ಪು ಗ್ಯಾಂಗ್ ಇದೆ ಟಿಪ್ಪು ಜಯಂತಿ ಆಚರಿಸಿದರಲ್ಲ ಅದೇ ರೀತಿ ಗ್ಯಾಂಗ್ ಒಂದರಿಂದ ಒತ್ತಡ ಹೇರಲಾಗುತ್ತಿದೆ ಎಂದು ಆರ್.ಅಶೋಕ್ ಹೇಳಿದರು.!
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವನೋ ಅನಾಮಿಕ ಕೊಟ್ಟ ದೂರದಿಂದ ಈ ಒಂದು ಪ್ರಕರಣ ದೊಡ್ಡದು ಮಾಡಿದ್ದಾರೆ. ನೂರಾರು ಕೊಲೆಗಳು ಅತ್ಯಾಚಾರಗಳು ಆಗಿವೆ ಅಂತ ಬಿಂಬಿಸಿದ್ದಾರೆ. ಹಾಗಾಗಿ ಈ ಒಂದು ತನಿಖೆಗೆಯನ್ನು ಎನ್ಐಎಗೆ ವಹಿಸಬೇಕು ಎಂದು ಅಗ್ರಹಿಸಿದರು.
ಧರ್ಮಸ್ಥಳದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮಾಡಿದ್ದಾರೆ ಎಂಬಂತೆ ಬಿಂಬಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಪಿ ಮತ್ತು ಡಿಸಿ ಗೆ ಸಾವಿರದೂರು ಬರುತ್ತವೆ. ಆ ಎಲ್ಲಾ ದೂರುಗಳಿಗೂ ಎಸ್ಐಟಿ ರಚಿಸುತ್ತಾರಾ? ಮುಸುಕು ದಾರಿಗೆ ಹಣ ಕೊಟ್ಟು ಕರೆದುಕೊಂಡು ಬಂದಿರುವ ಹಾಗಿದೆ. ವಿದೇಶದಿಂದ ಹಣ ಎಲ್ಲಿಂದ ಬರುತ್ತಿದೆ ಅದು ಮುಖ್ಯ. ಧರ್ಮಸ್ಥಳದ ಮಂಜುನಾಥ ದೇವರಿಗೆ ಅವಹೇಳನ ಮಾಡುವ ಷಡ್ಯಂತರವಾಗಿದೆ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರೀತಿ ಆಗಿಲ್ಲ ಎಂದರು.
ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಟಿಪ್ಪು ಗ್ಯಾಂಗ್ನಿಂದ ನಡೆದಿದೆ ಸೋಶಿಯಲ್ ಮೀಡಿಯಾ ಯೂಟ್ಯೂಬ್ ಗಳ ಮೂಲಕ ಅಪಪ್ರಚಾರ ನಡೆಯುತ್ತಿದೆ ಯೂಟ್ಯೂಬರ್ ಸಮೀರ ಸಹ ಟಿಪ್ಪು ಗ್ಯಾಂಗ್ ಸರ್ಕಾರಕ್ಕೆ ಧರ್ಮದ ಬಗ್ಗೆ ಕಾಳಜಿ ಇದ್ದರೆ ಎನ್ ಐ ಎ ಗೆ ಒಪ್ಪಿಸಬೇಕು ಸತ್ಯ ಬಯಲಾಗಬೇಕು. ಸಿಎಂ ಸಿದ್ದರಾಮಯ್ಯಗೆ ಒಪ್ಪಿಸಿದವರು ಯಾರು ಎಲ್ಲವೂ ಗೊತ್ತಾಗಬೇಕು ಈ ತನಿಖೆ ಇಲ್ಲಿಗೆ ಮುಚ್ಚಿ ಹೋಗುತ್ತದೆ ಅನಿಸುತ್ತದೆ ಹೀಗಾಗಿ ಪ್ರಕರಣವು ಎನ್ ಐ ಗೆ ನೀಡಿ ಸಂಪೂರ್ಣ ತನಿಖೆ ಆಗಬೇಕು ಈ ತಂಡ ಯಾವ ಯಾವ ದೇವಸ್ಥಾನಕ್ಕೆ ಸಂಚು ರೂಪಿಸಿದೆ ಗೊತ್ತಾಗಬೇಕು ಎಂದು ಚಿತ್ರದುರ್ಗದಲ್ಲಿ ವಿರೋಧ ಪಕ್ಷದ ನಾಯಕ ಅರಸೋಕೆ ಹೇಳಿಕೆ ನೀಡಿದರು.