ಮುಂಬೈ: ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಳದಿ ಲೋಹದ ನೂತನ ದರ ಪಟ್ಟಿಗಳು ಇಂತಿವೆ.
ಚಿನ್ನದ ದರ ಇಂದು ಕೂಡ ಕೊಂಚ ಏರಿಕೆಯಾಗಿದ್ದು, ಗುರುವಾರ ಚಿನ್ನದ ಬೆಲೆ 600 ರೂಗಳಷ್ಟು ಏರಿಕೆಯಾಗಿದೆ.
ಇಂದು ಅಂದರೆ ಗುರುವಾರ 22 ಕ್ಯಾರಟ್ ಚಿನ್ನದ ದರದಲ್ಲಿ 50 ರೂ ಏರಿಕೆಯಾಗಿದ್ದು, 24 ಕ್ಯಾರಟ್ ಬಂಗಾರದ ಧಾರಣೆ ಗ್ರಾಂಗೆ 60ರೂ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ದರ 9,230ಕ್ಕೆ ಏರಿಕೆಯಾಗಿದ್ದು, ಅಂತೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 92,300ಕ್ಕೆ ಏರಿಕೆಯಾಗಿದೆ.
24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 10,075 ರೂ ಇಳಿಕೆಯಾಗಿದ್ದು, 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 1,00,750 ರೂ ಗೆ ಏರಿಕೆಯಾಗಿದೆ.
ಇನ್ನು ಬೆಳ್ಳಿಯ ಬೆಲೆ ಕೂಡ ಗ್ರಾಂಗೆ ಅಲ್ಪ ಏರಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರದಲ್ಲಿ 1ರೂ ಏರಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ 116 ರೂಗೆ ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 11,600 ರೂಗೆ ಮತ್ತು 1 Kg ಬೆಳ್ಳಿದರ 1,16,000 ರೂ ಗೆ ಏರಿಕೆಯಾಗಿದೆ.