ದಾವಣಗೆರೆ: ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಆನಗೋಡು 66/11 ಕೆವಿ ಉಪಕೇಂದ್ರದ 11 ಕೆವಿ ಮಾರ್ಗಗಳ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಆಗಸ್ಟ್ 22 ಮತ್ತು 23 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಅತ್ತಿಗೆರೆ, ಬಾಡಾ, ಚಂದ್ರೇನಹಳ್ಳಿ, ಚಿಕ್ಕತೊಗಲೇರಿ, ದ್ಯಾಮೇನಹಳ್ಳಿ, ಗಂಧಮುಕ್ತೇನಹಳ್ಳಿ, ಗೋಪನಾಳು, ಹಿರೇತೊಗಲೇರಿ, ಕಾಶೀಪುರ, ಕುರ್ಕಿ, ರಾಜಗರ್ ಕ್ಯಾಂಪ್ ರಾಮಗೊಂಡನಹಳ್ಳಿ, ತೋಳಹುಣಸೆ, ವೆಂಕಟೇಶ್ವರ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.