ಬೆಂಗಳೂರು: ರಾಜ್ಯದಲ್ಲಿ ಅಲೆಮಾರಿ ಕುರಿಗಾಹಿಗಳ ಕಲ್ಯಾಣ ಮತ್ತು ಅವರ ವಿರುದ್ಧ ದೌರ್ಜನ್ಯಗಳ ತಡೆ ಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧದ ರಕ್ಷಣೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.
ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ಅವರು, ರಾಜ್ಯದಲ್ಲಿ 15,000 ಕುರಿಗಾಹಿಗಳಿರುವ ಅಂದಾಜು ಇದ್ದು, ಇದುವರೆಗೆ 5000 ಮಂದಿ ನೋಂದಾಯಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷದಲ್ಲಿ 242 ಕುರಿಗಾಯಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿದೆ ವಲಸೆ ಹೋಗುವಾಗ ಕುರಿಗಳ ಕಳವು, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಎಸಗುವ ಕೃತ್ಯಗಳಾಗಿದ್ದು, ದೌರ್ಜನ್ಯ ತಡೆ ಕ್ರಮದ ಜೊತೆಗೆ ಭದ್ರತೆ ಕಲ್ಪಿಸಲು ವಿಧೇಯಕ ಮಂಡಿಸಲಾಗಿದೆ. ಕುರಿಗಾಯಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ದಾಳಲಾಕದರೆ 5 ವರ್ಷ ಜೈಲು.!