ಹಿರಿಯಡ್ಕ: ಭಜರಂಗದಳ ಹಿರಿಯಡ್ಕ ಘಟಕ ಕೋಟ್ನಕಟ್ಟೆಯಲ್ಲಿ ಆ.20 ರಂದು ಪಂಜಿನ ಮೆರಣಿಗೆಯನ್ನು ನಿಗದಿತ ಸಮಯಕ್ಕಿಂತ ವಿಳಂಬವಾಗಿ ನಡೆಸಿ, ಕೋಮು ಸೌಹಾರ್ದತೆಗೆ ಧಕ್ಕೆ ಆಗುವಂತಹ ಪ್ರಕರಣದಲ್ಲಿ ಭಾಗಿಯಾದ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಶರಣ್ ಪಂಪ್‌ವೆಲ್ ರನ್ನು ಆಹ್ವಾನಿಸಿದ ಸಂಘಟಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಆ.20 ರಂದು ಭಜರಂಗ ದಳ ಹಿರಿಯಡ್ಕ ಘಟಕವು ಸಂಜೆ 6 ಗಂಟೆಯಿಂದ ಕೋಟ್ನಕಟ್ಟೆಯಿಂದ ದೇವಾಡಿಗರ ಸಭಾಭವನದ ತನಕ ಪಂಜಿನ ಮೆರವಣಿಗೆ ಹಮ್ಮಿಕೊಂಡಿತ್ತು. ಆದರೆ ಕಾರ್ಯಕ್ರಮವನ್ನು ಆಯೋಜಕರು ನಿಗಧಿಪಡಿಸಿದ ಸಮಯಕ್ಕೆ ಪ್ರಾರಂಬಿಸದೆ 7:30 ಕ್ಕೆ ಪಂಜಿನ ಮೆರವಣಿಗೆ ನಡೆಸಿದ್ದರು.
ಬಳಿಕ ದೇವಾಡಿಗ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂಥ ಪ್ರಚೋದನಾಕಾರಿ ಭಾಷಣ ಮಾಡಬಾರದು ಎಂದು ತಿಳಿಸಿದ್ದರೂ ಸಹ ಠಾಣೆಯ ರೌಡಿ ಆಸಾಮಿ ದಿನೇಶ್ ಮೆಂಡನ್ ಮತ್ತು ಅವರ ಸಂಗಡಿಗರು ಕೋಮು ಸೌಹಾರ್ದತೆಗೆ ಧಕ್ಕೆ ಆಗುವಂತಹ ಪ್ರಚೋದನಾಕಾರಿ ಭಾಷಣ ಮಾಡುವ ಕೋಮು ಸೌಹಾರ್ದತೆಗೆ ಧಕ್ಕೆ ಆಗುವಂತಹ ಪ್ರಕರಣದಲ್ಲಿ ಭಾಗಿ ಆಗಿದ್ದ ಶರಣ್ ಪಂಪ್ ವೆಲ್‌ರನ್ನು ಆಹ್ವಾನಿಸಿ ವೇದಿಕೆಯಲ್ಲಿ ಅನುವು ಮಾಡಿಕೊಟ್ಟಿರುತ್ತಾರೆ
ಕಾರ್ಯಕ್ರಮ ರಾತ್ರಿ 10 ಗಂಟೆವರೆಗೆ ನಡೆಸಿದ್ದು ಕಾರ್ಯಕ್ರಮ ಆಯೋಜಿಸಿದ ದಿನೇಶ್ ಮೆಂಡನ್ ಹಾಗೂ ಸುಬ್ರಹ್ಮಣ್ಯ ಭಟ್ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2025 ಕಲಂ: 105 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.