ವಿಜಯಪುರ: ಎತ್ತಿನ ಮೈ ತೊಳೆಯಲು ಕೃಷ್ಣಾ ನದಿಗೆ ಇಳಿದಿದ್ದ ರೈತನನ್ನು ಮೊಸಳೆ ಎಳೆದೊಯ್ದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ತಂಗಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ್ ಅಕುಂಚಗನೂರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಕಾಶಿನಾಥ ಹಣಮಂತ ಕಂಬಳಿ (38) ಮೊಸಳೆ ದಾಳಿಗೆ ಒಳಗಾಗಿರುವ ರೈತ. ಕಾಶಿನಾಥನನ್ನು ಮೊಸಳೆ ಎಳೆದೊಯ್ದಿದೆ ಎಂದು ಮತ್ತೋರ್ವ ರೈತ ಧರೆಪ್ಪ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಕಾಶಿನಾಥನಿಗಾಗಿ ನಡಿಯಲ್ಲಿ ಶೋಧ ನಡೆಸಲಾಗುತ್ತಿದೆ.
(ಸಾಂದರ್ಭಿಕ ಚಿತ್ರ)