ಹಿಂದೆಲ್ಲ ಅಳಿಯನನ್ನು ಮಗನಂತೆ ನೋಡ್ತಿದ್ರು. ಆದರೀಗ ಅಳಿಯ ಅತ್ತೆಯ ಫೆವರೆಟ್ ಆಗ್ತಿದ್ದಾನೆ. ಬರೀ ಅಳಿಯ ಫೆವರೆಟ್ ಆಗೋದು ಮಾತ್ರವಲ್ಲ ಅವನನ್ನು ಪ್ರೀತಿಸಿ, ಮಗಳಿಗೆ ಕೈಕೊಟ್ಟು, ಅಳಿಯನ ಜತೆ ಓಡಿ ಹೋಗುವ ಪ್ರಕರಣ ಜಾಸ್ತಿಯಾಗುತ್ತಿದೆ.
ಮಗಳನ್ನು ಮದುವೆ ಆಗೋಕೆ ಬಂದ ಹುಡುಗನ ಜತೆ ಅಮ್ಮ ಓಡಿ ಹೋದ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಅಲಿಗಢದಲ್ಲಿ ಮಹಿಳೆಯೊಬ್ಬಳು ತನ್ನ ಭಾವಿ ಅಳಿಯನ ಜತೆ ಓಡಿ ಹೋಗಿದ್ದಳು. ಈಗ ಬಸ್ತಿ ಜಿಲ್ಲೆಯಲ್ಲಿ ಇಂಥದ್ದೇ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಮತ್ತು ಹುಡುಗನ ಮೇಲೆ ಕುಟುಂಬಸ್ಥರು ದೂರು ನೀಡಿದ್ದಾರೆ. ಪೊಲೀಸರು ಪ್ರೇಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ
. ದುಬೌಲಿಯಾ ಜಿಲ್ಲೆಯ ಹುಡುಗನ ಸಂಬಂಧ ಗೋಡಾ ಜಿಲ್ಲೆಯ ಹುಡುಗಿ ಜತೆ ನಿಶ್ಚಯವಾಗಿತ್ತು. ನಾಲ್ಕು ತಿಂಗಳ ಹಿಂದೆಯೇ ಮದುವೆ ಮಾತುಕತೆಯಾಗಿತ್ತು. ಕುಟುಂಬಸ್ಥರೆಲ್ಲ ಸಂಬಂಧದಿಂದ ಖುಷಿಯಾಗಿದ್ರು. ಹುಡುಗಿ ಮತ್ತೆ ಹುಡುಗನ ಜತೆ ಮಾತುಕತೆ ನಡೀತಿತ್ತು. ನಂತ್ರ ಹುಡುಗನ ಜತೆ ಹುಡುಗಿ ಅಮ್ಮನೂ ಮಾತನಾಡೋಕೆ ಶುರು ಮಾಡಿದ್ಲು. ಆರಂಭದಲ್ಲಿ ಇದನ್ನು ಮನೆಯವರು ಗಂಭೀರವಾಗಿ ಪರಿಗಣಿಸ್ಲಿಲ್ಲ. ದಿನ ಕಳೆದಂತೆ ಅವರ ವರ್ತನೆ, ಕುಟುಂಬಸ್ಥರಿಗೆ ಅನುಮಾನ ತಂದಿತ್ತು. ಸತ್ಯ ಹೊರ ಬರ್ತಿದ್ದಂತೆ ಹುಡುಗಿ ಮನೆಯವರು ಎಚ್ಚೆತ್ತುಕೊಂಡಿದ್ದರು. ಯುವಕನ ಜತೆ ಸಂಬಂಧ ಕಡಿದುಕೊಂಡಿದ್ದಲ್ದೆ ಬೇರೆ ಹುಡುಗನ ಜತೆ ಮದುವೆ ಫಿಕ್ಸ್ ಮಾಡಿದ್ದರು. ಆದ್ರೆ ಹುಡುಗ ಹಾಗೂ ಅವನ ಭಾವಿ ಅತ್ತೆ ಮಧ್ಯೆ ಸಂಬಂಧ ಮುಂದುವರಿದಿತ್ತು. ನಾಲ್ಕು ದಿನಗಳ ಹಿಂದೆ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಕುಟುಂಬಸ್ಥರು ಇಬ್ಬರ ಹುಡುಕಾಟ ನಡೆಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದೆ.
ಇಬ್ಬರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇದರಿಂದ ಬೇಸತ್ತ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಇಬ್ಬರ ಮೊಬೈಲ್ ಲೊಕೇಷನ್ ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಮೊಬೈಲ್ ಸ್ವಿಚ್ ಆಪ್ ಆದ ಕಾರಣ ಪತ್ತೆ ಕಾರ್ಯ ವಿಳಂಬ ಆಗ್ತಿದೆ. ಕುಟುಂಬಸ್ಥರದಲ್ಲಿ ಆಕ್ರೋಶ ಮನೆ ಮಾಡಿದೆ. ಈ ಅತ್ತೆ – ಅಳಿಯ ಕೂಡ ಇನ್ನೂ ಪೊಲೀಸ್ ಕೈಗೆ ಸಿಕ್ಕಿಲ್ಲ. ಶೀಘ್ರವೇ ಪತ್ತೆ ಹಚ್ಚುವ ಭರವಸೆಯನ್ನು ಪೊಲೀಸರು ನೀಡ್ತಾನೆ ಇದ್ದಾರೆ. ಕೆಲ ದಿನಗಳ ಹಿಂದೆ ಅಲಿಗಢದಲ್ಲೂ ಇಂಥ ಘಟನೆ ನಡೆದಿತ್ತು. ಭಾವಿ ಅಳಿಯನ ಜತೆ ಅತ್ತೆ ನಾಪತ್ತೆಯಾಗಿದ್ದಳು. ಕಾರಣ ಏನು? ಅತ್ತೆಗೆ ತನ್ನ ಪತಿ ಅಥವಾ ಕುಟುಂಬದಿಂದ ಪ್ರೀತಿ, ಗೌರವ ಅಥವಾ ಭಾವನಾತ್ಮಕ ಬೆಂಬಲ ಸಿಗದಿದ್ದಾಗ, ಅಳಿಯನಲ್ಲಿ ಇದು ಸಿಕ್ಕಾಗ ಆಕೆ ಅವನಿಗೆ ಹತ್ತಿರವಾಗ್ತಾಳೆ ಎನ್ನುತ್ತಾರೆ ತಜ್ಞರು. ಹುಡುಗರು ತಮಗಿಂತ ವಯಸ್ಸಿನಲ್ಲಿ ಹಿರಿಯ, ಅನುಭವಿ ಮಹಿಳೆಯರಿಗೆ ಹೆಚ್ಚು ಆಕರ್ಷಿತರಾಗೋದು ಕೂಡ ಇಲ್ಲಿ ಒಂದು ಕಾರಣ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಬಹಳ ಕಡಿಮೆ ಇದ್ದಾಗ್ಲೂ ಅಳಿಯ ಮತ್ತು ಅತ್ತೆಯ ನಡುವೆ ಸ್ನೇಹ ಅಥವಾ ಆಕರ್ಷಣೆ, ಪ್ರೀತಿಗೆ ತಿರುಗಬಹುದು.