ಚಿತ್ರದುರ್ಗ : ಸಮಾಜದಿಂದ ಸಹಾಯವನ್ನು ಪಡೆದವರು ಮುಂದಿನ ದಿನದಲ್ಲಿ ಸಮಾಜಕ್ಕೆ ಏನಾದರೂ ಕೂಡುಗೆಯನ್ನು ನೀಡುವಂತೆ ಪ್ರತಿಭಾ ಪುರಸ್ಕಾರಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯಾಯಾವಾದಿಗಳು, ಮಾಜಿ ಶಾಸಕರು, ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಎಂ.ಬಿ.ತಿಪ್ಪೇರುದ್ರಪ್ಪ ಕರೆ ನೀಡಿದರು.
ಚಿತ್ರದುರ್ಗ ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಕುಂಚಿಗ ವೀರಶೈವ ಲಿಂಗಾಯತ ಸಮಾಜ, ಹಾಗೂ ಉತ್ಥಾನ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮುದಾಯದವರ ಬೇರೆಯವರ ಸಮಾಜದೊಂದಿಗೆ ಉತ್ತಮವಾದ ಭಾಂಧವ್ಯವನ್ನು ಹೊಂದುವುದರ ಮೂಲಕ ಅವರಂತೆ ನಾವಾಗಬೇಕೆಂದು ಮುನ್ನಡೆಯಬೇಕಿದೆ. ನಾನು ನಮ್ಮ ಸಮುದಾಯದವರಿಗೆ ಸಹಾಯವಾಗಲೆಂಬ ಉದ್ದೇಶದಿಂದ ಹಾಸ್ಟಲ್ ನಿರ್ಮಾಣ ಮಾಡಿದೆ ಇದರಲ್ಲಿ ಉತ್ತಮವಾದ ಸೌಲಭ್ಯಗಳನ್ನು ಸಹಾ ನೀಡಲಾಗಿತ್ತು 10 ವರ್ಷಗಳ ಕಾಳ ನಿರಂತರವಾಗಿ ನಡೆಸಿದೆ ಆದರೆ ಕೆಲವರು ಇದರ ಬಗ್ಗೆ ಹಾಗೂ ನನ್ನ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹಾಡುವುದನ್ನು ಕೇಳಲಾಗದೆ ಅದನ್ನು ನಿಲ್ಲಿಸಿಬಿಟ್ಟೆ, ನಮ್ಮ ಹಾಸ್ಟಲ್ನಲ್ಲಿ ಬೆಳದವರು ಈಗ ಉನ್ನತವಾದ ಸ್ಥಾನದಲ್ಲಿ ಇದ್ದರೆ ಮತ್ತೇ ಕೆಲವರು ನಿವೃತ್ತಿಯನ್ನು ಹೊಂದಿದ್ದಾರೆ ಎಂದರು.
ಸಮಾಜದಲ್ಲಿನ ನಮ್ಮ ಜನತೆ ಇಂತಹ ಕಾರ್ಯಕ್ರಮಗಳಿಗೆ ಸಹಾಯವನ್ನು ಮಾಡುವಂತ ಗುಣವನ್ನು ಬೆಳಿಸಿಕೊಳ್ಳಬೇಕಿದೆ ಇಲ್ಲವಾದಲ್ಲಿ ಇಂತಹ ಕಾರ್ಯಕ್ರಮ ಮಾಡಲು ಸಾಧ್ಯವಾಗುವುದಿಲ್ಲ, ಈಗ ಸಮಾಜದಿಂದ ಸಹಾಯವನ್ನು ಪಡೆದವರು ಮುಂದಿನ ದಿನದಲ್ಲಿ ಇದನ್ನು ನೆನಸಿಕೊಂಡು ಬೇರೆಯವರಿಗೆ ಸಹಾಯವನ್ನು ಮಾಡಿ ಇದು ಸಮಾಜಕ್ಕೆ ತೀರಿಸುವ ಋಣವಾಗಿದೆ. ನಿಮ್ಮ ಸಹಾಯವನ್ನು ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ಬೇರೆ ಸಮುದಾಯದರಿಗೂ ಸಹಾ ಸಹಾಯವನ್ನು ಮಾಡಿ ಎಂದು ತಿಪ್ಪೇರುದ್ರಪ್ಪ ಕರೆ ನೀಡಿದರು.
ನಿವೃತ್ತ ಉಪನ್ಯಾಸಕರು, ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಕಾರ್ಯದರ್ಶಿಗಳಾದ ಹೆಚ್.ಕುಬೇರಪ್ಪ ಮಾತನಾಡಿ, ನಮ್ಮ ಸಮುದಾಯದಲ್ಲಿನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುವುದು ನಮ್ಮ ಸಮುದಾಯದ ಕೆಲಸವಾಗಿದೆ, ಇದರಿಂದ ಮುಂದಿನ ಮಕ್ಕಳಿಗೆ ಸಹಾ ಪ್ರೋತ್ಸಾಹ ಸಿಕ್ಕಂತೆ ಆಗುತ್ತದೆ. ನಮ್ಮ ಸಮುದಾಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಅಂಕಗಳನ್ನು ಪಡೆಯುವರ ಸಂಖ್ಯೆ ಹೆಚ್ಚಾಗುತ್ತಿದೆ. ನಿಮ್ಮ ಪ್ರತಿಭೆಯನ್ನು ಗುರುತಿಸಿ ಸನ್ಮಾನ ಮಾಡಿದ ಸಮಾಜವನ್ನು ಮರೆಯಬೇಡಿ, ತಂದೆ-ತಾಯಿಯನ್ನು ಗೌರವಿಸಿ, ಕಡೆಗಣಿಸಬೇಡಿ, ಇಂದಿನ ದಿನಮಾನದಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿವೆ ಇದಕ್ಕೆ ಶಿಕ್ಷಣವನ್ನು ಪಡೆದವರೆ ಕಾರಣರಾಗಿದ್ದಾರೆ ಎಂಬುದು ದುರಂತ ಎಂದರು.
ನಿವೃತ್ತ ಪ್ರಚಾರ್ಯರಾದ ಬಿ.ಸಿ.ಶಾಂತರಾಜಿ ಮಾತನಾಡಿ, ಮಗುವಿಗೆ ಮನೆಯ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು, ತಂದೆ ವಿದ್ಯೆಯನ್ನು ಕಲಿಸಿದರೆ ಗುರು ಬುದ್ದಿಯನ್ನು ಕಲಿಸುತ್ತಾನೆ, ಏನಾದರೂ ಬಿದ್ದರೆಚ ತಾಯಿಯಾದವಳು ಬಂದು ನೋಡುತ್ತಾಳೆ, ಇದು ಇವರ ಕರ್ತವ್ಯವಾಗಿದೆ. ಮಕ್ಕಳನ್ನು 5 ವರ್ಷದವರೆಗೂ ಮುದ್ದಿಸಬೇಕು, 10 ವರ್ಷದ ಮಗುವನ್ನು ಮನಸ್ಸು ಅರಳುವಂತೆ ಮಾಡಬೇಕು 15 ವರ್ಷದ ಮಗನನ್ನು ತಂದೆಯಾದವನು ಗೆಳೆಯನಂತೆ ನೋಡಬೇಕಿದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಂದೆ-ತಾಯಿಯವರ ಪಾತ್ರ ಆಗಾಧವಾಗಿದೆ. ಮಾನವ ಜನ್ಮ ಶ್ರೇಷ್ಠವಾದದು ಅದು ಸಿಕ್ಕದೆ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕಿದೆ ಎಂದರು.
ಕುಂಚಿಗ ವೀರಶೈವ ಲಿಂಗಾಯತ ಸಮಾಜದ ನಿರ್ದೇಶಕರಾದ ಕೃಷ್ಣಮೂರ್ತಿ, ನಿವೃತ್ತ ಪೋಲಿಸ್ ಅಧಿಕಾರಿ ಬಸವರಾಜಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ಎಲ್.ಬಿ.ರಾಜಶೇಖರಪ್ಪ, ಭಾಗವಹಿಸಿದ್ದರು. ಅನನ್ಯ ಪ್ರಾರ್ಥಿಸಿದರೆ. ರಾಜಪ್ಪ ಸ್ವಾಗತಿಸದರು. ಲವಕುಮಾರ್ ಕಾರ್ಯಕ್ರಮ ನಿರೂಪಿಸಿದರು.