ಚಿತ್ರದುರ್ಗ: ನಗರದ ಬಿಡಿ ರಸ್ತೆಯಲ್ಲಿ ಅನೇಕ ಗಿಡಗಳನ್ನು ದುಷ್ಕರ್ಮಿಗಳು ಮುರಿದಿದ್ದು ಅದರ ವಿರುದ್ಧವಾಗಿ ಪ್ರತಿಭಟಿಸಿ ಮನವಿಯನ್ನು ಅಧಿಕಾರಿಗಳಿಗೆ ನೀಡಲಾಯಿತು
ಪ್ರತಿಯಾಗಿ ಅರಣ್ಯ ಅಧಿಕಾರಿಗಳು ಟಾರ್ಗೆಟ್ ತಂಡದ ಕಾರ್ಯವನ್ನು ಶ್ಲಾಘಿಸಿದರು ಜೊತೆಗೆ ಮುಂದಿನ ದಿನದಲ್ಲಿ ನಾವು ಸಹ ತಮ್ಮೊಂದಿಗೆ ಉತ್ತಮ ರೀತಿಯಲ್ಲಿ ಕೈಜೋಡಿಸುವ ಮೂಲಕ ಚಿತ್ರದುರ್ಗವನ್ನು ಇನ್ನು ಹೆಚ್ಚಿನ ಹಸಿರು ಗೊಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇವೆ ಎಂದರು.
ಬಹು ಮುಖ್ಯವಾಗಿ ಗಿಡ ಮುರಿಯುವಂತಹ ಹೀನ ಮನಸ್ಥಿತಿಯ ಯಾವುದೇ ವ್ಯಕ್ತಿಯಾಗಿದ್ದರು ಆ ವ್ಯಕ್ತಿಯನ್ನು ಗುರುತಿಸಿ ಅವರ ವಿರುದ್ಧವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ ಪ್ರತಿಭಟನೆಯಲ್ಲಿ ಮುಕೇಶ್ ಓಸ್ವಾಲ್, ಶಶಿಧರ್, ಯುವರಾಜ್, ಶಾಂತಕುಮಾರ್, ಜೆಪಿ ಹರೀಶ್, ಪ್ರಬಣ್ಣ ಶಾಮಿಯಾನ, ತೇಜು ಮೂರ್ತಿ, ಹೇಮಂತ್ ಕುಮಾರ್ , ಶಿವಣ್ಣ, ಸಿದ್ದರಾಜ್ ಜೋಗಿ, ಮಧುಸೂದನ್ ರೆಡ್ಡಿ, ಹಾಗೂ ಇನ್ನೂ ಅನೇಕ ಟಾರ್ಗೆಟ್ ತಂಡದ ಕಾರ್ಯಕರ್ತರು ಭಾಗವಹಿಸಿದ್ದರು