ಬಿಹಾರ : ಯುಪಿಎಸ್‌ಸಿಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಹೀಗೆ ತನ್ನ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ನೇಹಾ ಕುಮಾರಿ ಅವರ ಯಶೋಗಾಥೆ ಇದು.
ನೇಹಾ ಕುಮಾರಿ ಬಿಹಾರದ ಮಧೇಪುರದವರು. ಅವರ ತಂದೆ ರಮಾನಂದ ಲಾಲ್ ದಾಸ್ ವಕೀಲರಾಗಿದ್ದು, ತಾಯಿ ಪೂನಂ ವರ್ಮಾ ಕೂಡ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. ಮುರ್ಲಿಗಂಜ್‌ನ ಸಂಸ್ಕಾರ್ ಭಾರತಿ ಪಬ್ಲಿಕ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿದ ನೇಹಾ, ನಂತರ ಜವಾಹರ್ ನವೋದಯ ವಿದ್ಯಾಲಯ, ಮನ್ಹಾರಾಗೆ ಸೇರಿ ಅಲ್ಲಿ 12 ನೇ ತರಗತಿಯವರೆಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು.ಶಾಲಾ ಶಿಕ್ಷಣದ ನಂತರ, ನೇಹಾ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ನಲ್ಲಿ ಪದವಿ ಪಡೆದರು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಅವರು, 2017ರಲ್ಲಿ ಚಿನ್ನದ ಪದಕ ಪಡೆದರು.
ಅದೇ ವಿಶ್ವವಿದ್ಯಾಲಯದಲ್ಲಿ ಅವರು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮುಂದುವರೆಸಿದರು. ಮತ್ತು 2018ರಲ್ಲಿ ಎನ್‌ಇಟಿ ಮತ್ತು ಜೆಆರ್‌ರಫ್ ಎರಡನ್ನೂ ಪೂರ್ಣಗೊಳಿಸಿದರು. 2022ರಲ್ಲಿ, ಅವರು ಇಂಗ್ಲಿಷ್‌ನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದರು.ಬಳಿಕ ನೇಹಾ ಅವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರು. ೨೦೨೨ರಲ್ಲಿ, ಅವರು ಸೆಬಿಯಲ್ಲಿ ರಾಜ್‌ಭಾಷಾ ಅಧಿಕಾರಿಯಾಗಿ ಆಯ್ಕೆಯಾದರು. ಅದೇ ವರ್ಷ, ಅವರು ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾದರು ಮತ್ತು ಪೂರ್ವಭಾವಿ, ಮುಖ್ಯ ಮತ್ತು ಸಂದರ್ಶನ ಮೂರೂ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ನೇಹಾ ಅಖಿಲ ಭಾರತ 916ನೇ ರ‍್ಯಾಂಕ್ ಪಡೆದರು. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ಬಿಹಾರ ಕೇಡರ್‌ಗೆ ಆಯ್ಕೆಯಾದರು ಮತ್ತು ಪ್ರಸ್ತುತ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇತ್ತೀಚೆಗೆ, ನೇಹಾ ಕುಮಾರಿ ಬಿಹಾರದಲ್ಲಿ ಹೊಸ ಹುದ್ದೆಗೆ ನೇಮಕಗೊಂಡಿದ್ದಾರೆ. ಅವರಿಗೆ ಆರೋಗ್ಯ ಇಲಾಖೆಯಲ್ಲಿ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯನ್ನು ನೀಡಲಾಗಿದ್ದು, ಇದು ಪ್ರಮುಖ ಆಡಳಿತಾತ್ಮಕ ಜವಾಬ್ದಾರಿಗಳನ್ನು ಒಳಗೊಂಡಿದೆ.
