ಬೆಂಗಳೂರು: ತಹಶಿಲ್ದಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳು. ಪೊಲೀಸರು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ದಾಳಿ ನಡೆಸಿ ಜೀತಕ್ಕೆ ಇಟ್ಟುಕೊಂಡಿದ್ದ 35 ಕಾರ್ಮಿಕರನ್ನು ಅತ್ತಿಬೆಲೆ, ಗುಂಜೂರು ಭಾಗದಲ್ಲಿ ಇದ್ದ ಕಾರ್ಮಿಕರನ್ನು ರಕ್ಷಿಸಲಾಗಿದೆ.
ತೆಲಂಗಾಣದ ವನಪರ್ತಿ ಜಿಲ್ಲೆಯ 35 ಕಾರ್ಮಿಕರನ್ನು ಹಣ ನೀಡಿ ಖರೀದಿಸಿ ಕರೆತಂದು ಜೀತಕ್ಕೆ ಇಟ್ಟುಕೊಳ್ಳಲಾಗಿತ್ತು. ಅತ್ತಿಬೆಲೆ, ಗುಂಜೂರು ಭಾಗದಲ್ಲಿ ಎರಡು ಗುಂಪುಗಳನ್ನಾಗಿ ಇರಿಸಿ ಜೀತಪದ್ಧತಿಯಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಅತ್ತಿಬೆಲೆ ಬಳಿ ಮೂವರು ಬಾಲಕರು ಸೇರಿ 11 ಕಾರ್ಮಿಕರನ್ನು ರಕ್ಷಿಸಲಾಗಿದೆ. ಗುಂಜೂರು ಗ್ರಾಮದ ಬಳಿ 24 ಕಾರ್ಮಿಕರನ್ನು ರಕ್ಷಿಸಲಾಗಿದೆ.
ರಾಮನಾಗಪ್ಪ ಶೆಟ್ಟಿ ಇನ್ಫ್ರಾ ಸ್ಟ್ರಕ್ಚರ್ ಕಂಪನಿಯಲ್ಲಿ ಜೀತದಾಳಾಗಿ ಕೆಲಸ ಮಾಡುತ್ತಿದ್ದರು. ಯಾಕೂಬ್ ಎಂಬಾತ ಆರ್ ಎನ್ ಎಸ್ ಕಂಪನಿಯಿಂದ ಸಬ್ ಕಾಂಟ್ರಾಕ್ಟ್ ಪಡೆದುಕೊಂಡಿದ್ದ. ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 1,60,000 ರೂಪಾಯಿ ಹಣ ನೀಡಿ ಖರೀದಿಸಿ ಕರೆತಂದಿದ್ದ. ಈ ಹಣಕ್ಕೆ ದಂಪತಿ ಹಾಗೂ ಕುಟುಂಬ ವರ್ಷವಿಡಿ ದುಡಿಯಬೇಕು ಎಂದು ಷರತ್ತು ಹಾಕಿದ್ದ ಎಂದು ತಿಳಿದಿಬಂದಿದೆ.
(ಸಾಂದರ್ಭಿಕ ಚಿತ್ರ)