ಮುಂಬೈ: ಮಂಗಳವಾರ ಮಧ್ಯರಾತ್ರಿ ಮುಂಬೈಗೆ ಹೊಂದಿಕೊಂಡಿರುವ ಪಾಲ್ಘರ್ ಜಿಲ್ಲೆಯ ವಿರಾರ್ ಪೂರ್ವದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಸುಮಾರು 8 ರಿಂದ 10 ಜನರು ಇನ್ನೂ ಸಿಲುಕಿಕೊಂಡಿದ್ದಾರೆ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ನಿನ್ನೆ ರಾತ್ರಿ 11:30 ಕ್ಕೆ ಈ ಅವಘಡ ಸಂಭವಿಸಿದೆ. ಈ ಕಟ್ಟಡ ಹತ್ತು ವರ್ಷ ಹಳೆಯದು ಮತ್ತು ಪುರಸಭೆ ಇದನ್ನು ಅತ್ಯಂತ ಅಪಾಯಕಾರಿ ಎಂದು ಘೋಷಿಸಿತ್ತು.
ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ(ಡಿಡಿಎಂಒ)-ಕಮ್-ಜಿಲ್ಲಾ ಪಾಲ್ಘರ್ ಪ್ರಕಾರ, ವಸಾಯಿ ತಾಲ್ಲೂಕಿನ ನರಂಗಿ ರಸ್ತೆಯಲ್ಲಿರುವ ಚಾಮುಂಡಾ ನಗರ ಮತ್ತು ವಿಜಯ್ ನಗರ ನಡುವೆ ಇರುವ ರಮಾಬಾಯಿ ಅಪಾರ್ಟ್‌ಮೆಂಟ್‌ನ ನಾಲ್ಕು ಅಂತಸ್ತಿನ ಕಟ್ಟಡದ ಹಿಂಭಾಗವು ಕಟ್ಟಡದ ಕೆಳಗಿನ ಭಾಗ ಕುಸಿದಿದೆ ಎಂದು ತಿಳಿದುಬಂದಿದೆ.