ಕನ್ನಡದ ಖ್ಯಾತ ನಿರೂಪಕಿ ನಟಿ ಅನುಶ್ರೀ ವಿವಾಹ ರೋಷನ್ ಜೊತೆ ನೆರವೇರಿದೆ. ನಿರೂಪಕಿ ಅನುಶ್ರೀ ಹಾಗೂ ರೋಷನ್ ಅವರು ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಹೊರ ವಲಯದಲ್ಲಿ ಈ ವಿವಾಹ ನೆರವೇರಿದೆ. ಈ ವೇಳೆ ಅನೇಕ ಸೆಲೆಬ್ರಿಟಿಗಳು ಹಾಜರಿದ್ದರು.
ವಿವಾಹದ ಬಳಿಕ ರೋಷನ್ ಅವರು ಅನುಶ್ರೀ ಹಣೆಗೆ ಮುತ್ತಿಟ್ಟಿದ್ದಾರೆ. ಮದುವೆಗೂ ಹಿಂದಿನ ದಿನ ಆ.27ರಂದು ನಡೆದ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಹಳದಿ ಶಾಸ್ತ್ರದ ವೇಳೆ ಅನುಶ್ರೀ, ರೋಷನ್ ಸು ಫ್ರಂ ಸೋ ಚಿತ್ರದ `ಬಂದರೋ ಬಂದರೋ ಬಾವ ಬಂದರೋ’ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಹಳದಿ ಶಾಸ್ತ್ರದಲ್ಲಿ ಮಿಂಚಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ನಿರೂಪಕಿ ಅನುಶ್ರೀ ಹಾಗೂ ರೋಷನ್ ಅದ್ಧೂರಿ ಮದುವೆಗೆ ರಾಜ್ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ನಟ ಶರಣ್ ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ.